ನವದೆಹಲಿ: ಇದೀಗ ಒಲಿಂಪಿಕ್ಗೆ ಕ್ಷಣಗಣನೆ ಆರಂಭವಾಗಿದೆ. ವಿಶ್ವವೇ ತನ್ನ ಚಿತ್ತವನ್ನು ರಿಯೋದತ್ತ ಬೆಳೆಸಿದೆ. ಆದರೆ ಒಲಿಂಪಿಕ್ ಜ್ಯೋತಿ ಬೆಳಗಿಸಲಿರುವ ಫುಟ್ಬಾಲ್ ದಿಗ್ಗಜ ಪೀಲೆ ಅನಾರೋಗ್ಯಕ್ಕೆ ತುತ್ತಾಗಿರುವುದು ಆಯೋಜಕರಿಗೆ ತಲೆನೋವಾಗಿದೆ.
75ರ ಹರೆಯದ ಪೀಲೆ ಮರಕಾನಾ ಸ್ಟೇಡಿಯಂನಲ್ಲಿ ಕ್ರೀಡಾ ಜ್ಯೋತಿ ಬೆಳಗಲು ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ. ಈ ಹಿಂದೆ ಸೊಂಟದ ಶಸ್ತ್ರಚಿಕಿತ್ಸೆಗೆ ಪೀಲೆ ಒಳಗಾದ್ದರಿಂದ ಇದೀಗ ಮಾಜಿ ಕ್ರೀಡಾಪಟು ನೋವಿನಿಂದ ಬಳಲುತ್ತಿದ್ದಾರೆ. ಇದರಿಂದಾಗಿ ಕ್ರೀಡಾ ಜ್ಯೋತಿ ಹಿಡಿದು ರಿಯೋ ಬೀದಿಯಲ್ಲಿ ಸಂಚರಿಸುವುದು ಕಷ್ಟವಾಗುವ ಸಾಧ್ಯತೆಯಿದೆ. ಆದರೆ ಆಯೋಜಕರು ಪೀಲೆ ಒಲಿಂಪಿಕ್ ಜ್ಯೋತಿ ಬೆಳಗಲಿದ್ದಾರೆ ಎಂಬ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಈ ಕುರಿತು ಪೀಲೆ ವಕ್ತಾರರಾದ ಜೋನ್ಸ್ ಫೋರ್ನ್ಸ್ ಪ್ರತಿಕ್ರಿಯಿಸಿ, ಪೀಲೆ ಅವರ ಕಾಲು ಹಾಗೂ ಸೊಂಟದಲ್ಲಿ ನೋವು ಕಾಣಿಸಿಕೊಂಡಿದೆ. ಇದರಿಂದಾಗಿ ವೈದ್ಯರ ಬಳಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ ಎಂದು ತಿಳಿಸಿದ್ದಾರೆ.
Comments are closed.