ನವದೆಹಲಿ: ಹಾಕಿ ಆಟಗಾರರಿಗೆ ಅಗತ್ಯವಿರುವ ಮೂಲ ಭೂತ ಸೌಕರ್ಯಗಳ ಕೊರತೆ ಇದೆ ಎಂದು ಭಾರತೀಯ ಹಾಕಿ ಟೀಮ್ ಕೋಚ್ ರೊಲೆಂಟ್ ಓಲ್ಟ್ಮನ್ ರಿಯೋದಲ್ಲಿನ ಅವ್ಯವಸ್ಥೆ ತೋಡಿಕೊಂಡ ಬೆನ್ನಲ್ಲೆ, ಇದೀಗ ಆರು ಒಲಿಂಪಿಕ್ ಕ್ರೀಡಾಕೂಟದಲ್ಲಿ ಭಾರತವನ್ನು ಪ್ರತಿನಿಧಿಸಿದ್ದ ಭರವಸೆಯ ಟೆನಿಸ್ ಆಟಗಾರ ಲಿಯಾಂಡರ್ ಪೇಸ್ ಅವರಿಗೆ ಸೂಕ್ತ ವಸತಿ ಸೌಲಭ್ಯ ಒದಗಿಸದೇ ಇರುವುದು ಬೆಳಕಿಗೆ ಬಂದಿದೆ.
ಈ ಕುರಿತು ಸ್ವತಃ ಪೇಸ್ ತಮ್ಮ ಸಮಸ್ಯೆಯನ್ನು ತೋಡಿಕೊಂಡಿದ್ದಾರೆ. ನಾನು ಗುರುವಾರವೇ ರಿಯೋ ತಲುಪಿದ್ದೇನೆ. ಇಲ್ಲಿಯವರೆಗೂ ನನಗೆ ವಿಶ್ರಾಂತಿ ಪಡೆಯಲು ಒಂದು ಕೊಠಡಿ ನೀಡಿಲ್ಲ. ಇದರಿಂದಾಗಿ ಭಾರತಿಯ ತಂಡದ ನಿರ್ದೇಶಕ ರಾಕೇಶ್ ಗುಪ್ತಾ ಅವರ ಕೊಠಡಿಯಲ್ಲಿ ತಂಗಿರುವುದಾಗಿ ಬೇಸರ ವ್ಯಕ್ತಪಡಿಸಿದ್ದಾರೆ. ಇನ್ನು ರೋಹನ್ ಬೋಪಣ್ಣ ಜತೆಗೆ ಕೊಠಡಿ ಹಂಚಿಕೊಳ್ಳಲು ಒಪ್ಪಿಕೊಂಡಿಲ್ಲ ಎಂದು ಮಾಧ್ಯಮಗಳಲ್ಲಿ ತಪ್ಪು ವರದಿಯಾಗಿದೆ. ಈ ಆರೋಪದಲ್ಲಿ ಯಾವುದೇ ಹುರುಳಿಲ್ಲ. ನಾನು ಹಾಗೆ ಹೇಳಿಯೂ ಇಲ್ಲ ಎಂದು ಈ ಸಂದರ್ಭದಲ್ಲಿ ಸ್ಪಷ್ಟಪಡಿಸಿದ್ದಾರೆ.
ಅಗಸ್ಟ್ 6ರಂದು ಪೇಸ್ ಪ್ರಥಮ ಲೀಗ್ ಪಂದ್ಯ ಆಡಲಿದ್ದಾರೆ.
ಭಾರತೀಯ ಆಟಗಾರರಿಗೆ ನೀಡಲಾಗಿರುವ ಅಪಾರ್ಟ್ವೆುಂಟ್ನಲ್ಲಿ ಪೀಠೊಪಕರಣಗಳ ಕೊರತೆ ಇದೆ. ಕುಳಿತುಕೊಳ್ಳಲು ಚೇರ್ ಇಲ್ಲ, ಒಂದು ಟೇಬಲ್ ಇಲ್ಲ ಮತ್ತು ಟಿವಿ ಇಲ್ಲ. ಆಟಗಾರರಿಗೆ ನೀಡಲಾಗಿರುವ ಅಪಾರ್ಟ್ವೆುಂಟ್ನಲ್ಲಿ ಮೂಲಭೂತ ಸೌಕರ್ಯ ಒದಗಿಸಲಾಗಿಲ್ಲ. ಒಂದು ಅಪಾರ್ಟ್ವೆುಂಟ್ನಲ್ಲಿ 6 ಜನರಿಗೆ ಉಳಿದುಕೊಳ್ಳಲು ವ್ಯವಸ್ಥೆ ಮಾಡಲಾಗಿದೆ. ಆದರೆ ಅಲ್ಲಿ ಇರುವುದು ಕೇವಲ 2 ಚೇರ್ವಾತ್ರ. ಹಾಗಾಗಿ ಕನಿಷ್ಟ 28 ಚೇರ್ಗಳು ಮತ್ತು ಒಂದು ಟೇಬಲ್ ಒದಗಿಸುವಂತೆ ಕೊರಿ ಭಾರತೀಯ ಹಾಕಿ ತಂಡದ ಕೋಚ್ ಓಲ್ಟ್ಮನ್ ರಿಯೋಗೆ ತೆರಳಿರುವ ಭಾರತಿಯ ತಂಡದ ನಿರ್ದೇಶಕ ರಾಕೇಶ್ ಗುಪ್ತಾ ಅವರಿಗೆ ಈ ಹಿಂದೆ ಪತ್ರ ಬರೆದಿದ್ದರು. ನಂತರ ಭಾರತೀಯ ಹಾಕಿ ತಂಡಕ್ಕೆ ಇವುಗಳನ್ನು ಖರೀದಿಸಲು ಹಣ ಮಂಜೂರು ಮಾಡಲಾಗಿತ್ತು.
Comments are closed.