ಕರ್ನಾಟಕ

ಮಕ್ಕಳ ಬೊಜ್ಜಿನ ಸಮಸ್ಯೆ ನಿವಾರಿಸಲು ನೀಡಬೇಕಾದ ಆಹಾರ ಪದ್ದತಿ.

Pinterest LinkedIn Tumblr

health_food_pic

ಮಂಗಳೂರು : 1. ಮೊಟ್ಟೆಗಳು: ಅತ್ಯಧಿಕ ಪ್ರೊಟೀನ್ ಇರುತ್ತದೆ. ಕಬ್ಬಿಣ, ಸತು, ಫಾಸ್ಫರಸ್ ಹೊಂದಿರುವ ಹಳದಿ ಭಾಗ ವಿಟಮಿನ್ಗಳ ಕಣಜ. ಮಗುವಿಗೆ ಅಗತ್ಯ ಖನಿಜಾಂಶ ಒದಗಿಸುತ್ತದೆ. ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಬಾಲ್ಯದಲ್ಲಿಯೇ ಬೊಜ್ಜಿನ ಸಮಸ್ಯೆಯಿದ್ದರೆ ತೂಕ ಇಳಿಸಿಕೊಳ್ಳಲು ಸಹಕಾರಿ.

2. ಒಣಮೆಣಸು: ಇದು ಕ್ಯಾಪ್ಸಾಸಿನ್ ರಾಸಾಯನಿಕ ಹೊಂದಿದ್ದು, ಶೀತ ಮತ್ತು ಜ್ವರದಿಂದ ಹೋರಾಡುವ ರೋಗ ನಿರೋಧಕ ವ್ಯವಸ್ಥೆಯನ್ನು ಬಲಗೊಳಿಸುತ್ತದೆ. ವಿಟಮಿನ್ ‘ಸಿ’ಯನ್ನು ದೇಹಕ್ಕೆ ಪೂರೈಸುತ್ತದೆ. ಕ್ಯಾನ್ಸರ್ ವಿರುದ್ಧ ಹೋರಾಡಲು ಸಹಕಾರಿ. ಚರ್ಮಕ್ಕೆ ಅಗತ್ಯ ಪ್ರೊಟೀನನ್ನು ಒದಗಿಸುತ್ತದೆ.

3. ಧಾನ್ಯ, ಮೊಳಕೆ ಕಾಳು: ಆಯಂಟಿಆಕ್ಸಿಡಂಟ್ಸ್ಗಳಾದ ಫ್ಲಾವೊನಾಯ್ಡ್ಸ್, ಕ್ಯಾರೊಟೆನಾಯ್ಡ್ಸ್, ಫೆನಾಲಿಕ್ ಆಯಸಿಡ್ ಮತ್ತು ಪಾಲಿಫೆನಾಲ್ಸ್ಗಳನ್ನು ಒಳಗೊಂಡಿವೆ. ಮೊಳಕೆ ಕಾಳುಗಳಲ್ಲಿ ಹೆಚ್ಚು ಪೋಷಕಾಂಶಗಳಿದ್ದು, ಉಪ್ಪು ಮತ್ತು ನಿಂಬೆರಸ ಹಾಕಿ ಹಸಿಯಾಗಿ ಅಥವಾ ಬೇಯಿಸಿ ಸೇವಿಸಬಹುದು.

4. ಬೀಜಗಳು: ಬಾದಾಮಿ ಮತ್ತು ವಾಲ್ನಟ್, ಪಿಸ್ತಾ, ಒಣದ್ರಾಕ್ಷಿಗಳು, ಖರ್ಜೂರ ಮತ್ತು ಒಣ ಫಿಗ್ಗಳಂಥ ಬೀಜಗಳು ಮಕ್ಕಳ ಆರೋಗ್ಯಕ್ಕೆ ಉತ್ತಮ. ಕುಂಬಳಕಾಯಿ, ಅಗಸೆ ಹಾಗೂ ಸೂರ್ಯಕಾಂತಿ ಬೀಜಗಳು ವಿಟಮಿನ್ ‘ಸಿ’ ಹೊಂದಿರುತ್ತವೆ. ರೋಗನಿರೋಧಕ ಶಕ್ತಿಗೆ ಪ್ರೋತ್ಸಾಹಕ.

5. ಮೊಸರು: ಮೊಸರಿನಲ್ಲಿ ಪ್ರೋಬಯಾಟಿಕ್ಸ್ ಹೆಚ್ಚಿನ ಪ್ರಮಾಣದಲ್ಲಿದ್ದು, ಜೀರ್ಣಶಕ್ತಿಯನ್ನು ಹೆಚ್ಚಿಸುತ್ತದೆ. ಅಲ್ಲದೆ, ಮೈಕ್ರೋಆರ್ಗಾನಿಸಮ್ಗಳ ವಿರುದ್ಧ ಹೋರಾಡಿ ರೋಗನಿರೋಧಕ ವ್ಯವಸ್ಥೆಯನ್ನು ಶಕ್ತಿಯುತಗೊಳಿಸುತ್ತದೆ. ಚರ್ಮ ಮತ್ತು ಹೃದಯದ ಆರೋಗ್ಯಕ್ಕೆ ಮೊಸರು ಉತ್ತಮ ಆಹಾರ.

Comments are closed.