ಮಡಿಕೇರಿ : ಧೀರ್ಘ ಕಾಲದ ಅನಾರೋಗ್ಯದಿಂದ ಬಳಲುತ್ತಿದ್ದ ಹಿರಿಯ ಕಾಂಗ್ರೆಸ್ ನಾಯಕ, ಮಾಜಿ ರಾಜ್ಯಸಭಾ ಸದಸ್ಯ ಎಫ್. ಎಂ ಖಾನ್ ಅವರು ನಗರದ ಖಾಸಗಿ ಆಸ್ಪತ್ರೆಯಲ್ಲಿ ಗುರುವಾರ ನಿಧನ ಹೊಂದಿದ್ದಾರೆ. ಅವರಿಗೆ 84 ವರ್ಷ ಪ್ರಾಯವಾಗಿತ್ತು.
ಇಂದಿರಾ ಗಾಂಧಿ ಅವರು ಪ್ರಧಾನಿಯಾಗಿದ್ದ ಅವಧಿಯಲ್ಲಿ ರಾಜ್ಯಸಭಾ ಸದಸ್ಯರಾಗಿದ್ದ ಖಾನ್ ಅವರು ಎಐಸಿಸಿ ಖಜಾಂಚಿ ಯಾಗಿಯೂ ಕಾರ್ಯ ನಿರ್ವಹಿಸಿದ್ದರು.
ಪುಷ್ಪ ಪ್ರೇಮಿಯಾಗಿದ್ದ ಖಾನ್ ಅವರು ಪ್ರತಿವರ್ಷ ಫಲ ಪುಷ್ಪ ಮೇಳ ನಡೆಸಿ ಜಾಗ್ರತಿ ಮೂಡಿಸುತ್ತಿದ್ದರು.
ಖಾನ್ ನಿಧನಕ್ಕೆ ಗಣ್ಯರು ಸಂತಾಪ ಸೂಚಿಸಿದ್ದಾರೆ.
-ಉದಯವಾಣಿ
Comments are closed.