ಹೊಸದಿಲ್ಲಿ : ಇಲ್ಲಿನ ಭಾಗೀರಥ್‌ಪುರದಲ್ಲಿ ವಯಸ್ಕರ ಸಿನಿಮಾ ನೋಡಲು ಹೋಗಿ ವಾಪಾಸಾಗುತ್ತಿದ್ದ 60 ವರ್ಷ ಪ್ರಾಯದ ವೃದ್ಧನೊಬ್ಬನನ್ನು ಬರ್ಬರವಾಗಿ ಇರಿದು ಕೊಲೆಗೈಯಲಾಗಿದೆ.ಯುವಕರೊಂದಿಗೆ ಮುಖ ಮೈಥುನಕ್ಕೆ ನಕಾರ ವ್ಯಕ್ತ ಪಡಿಸಿದ್ದೆ ಕೊಲೆಗೆ ಕಾರಣ ಎನ್ನುವ ಬೆಚ್ಚಿ ಬೀಳುವ ವಿಚಾರವನ್ನು ಪೊಲೀಸರು ತಿಳಿಸಿದ್ದಾರೆ.
ಹೇಮರಾಜ್ ಬಗಾರಿಯಾ ಎನ್ನುವವರನ್ನು ಮೂವರು ತರುಣರು ಮುಖ ರತಿಗೆ ಒತ್ತಾಯಿಸಿದ್ದಾರೆ,ನಿರಾಕರಿಸಿದಾಗ ಕುಪಿತರಾದ ಅವರು ಚೂರಿಯಿಂದ ಇರಿದು ಹತ್ಯೆಗೈದು ಶವವನ್ನು ನಿರ್ಜನ ಪ್ರದೇಶದಲ್ಲಿ ಎಸೆದಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಜುಲೈ 17 ರಂದು ಬಗಾರಿಯಾ ಅವರು ಸಿನೆಮಾ ನೋಡಲು ತೆರಳಿದ್ದು ಬಳಿಕ ನಾಪತ್ತೆಯಾಗಿದ್ದರು .ಈ ಬಗ್ಗೆ ಕುಟುಂಬ ಸದಸ್ಯರು ನಾಪತ್ತೆ ಪ್ರರಕಣವನ್ನು ದಾಖಲಿಸಿದ್ದರು.
ತನಿಖೆಗಿಳಿದ ಪೊಲೀಸರು ಯುವಕನೊಬ್ಬನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ನಾನು ಮತ್ತು ಬಗಾರಿಯಾ ಅವರು ಒಂದೆಡೆ ಸೇರಿ ಹಸ್ತಮೈಥುನ ಮಾಡಿಕೊಳ್ಳುತ್ತಿದ್ದು, ಈ ವೇಳೆ ಸ್ಥಳಕ್ಕೆ ರಿತಿಕ್ ,ಆಕಾಶ್ ಮತ್ತು ಚೇತನ್ ಅವರು ಆಗಮಿಸಿ ಮುಖ ಮೈಥುನಕ್ಕೆ ಒತ್ತಾಯಿಸಿದರು.ನಿರಾಕರಿಸಿದಾಗ ಇರಿದು ಅವರನ್ನು ಕೊಲೆಗೈಯಲಾಗಿದೆ ಎಂದು ಹೇಳಿದ್ದಾನೆ.
ಇದೀಗ ಇಬ್ಬರು ಆರೋಪಿಗಳನ್ನು ವಶಕ್ಕೆ ಪಡೆಯಲಾಗಿದ್ದು, ತಲೆ ಮರೆಸಿಕೊಂಡಿರುವ ಇನ್ನೊಬ್ಬನಿಗಾಗಿ ಶೋಧ ನಡೆಸಲಾಗುತ್ತಿದೆ.
-ಉದಯವಾಣಿ
Comments are closed.