ಕರ್ನಾಟಕ

ಆನೇಕಲ್‌ನಲ್ಲಿ ರೌಡಿಗಳ ಪೆರೇಡ್

Pinterest LinkedIn Tumblr

roudyಬೆಂಗಳೂರು,ಜು.೧೭-ಆನೇಕಲ್‌ನಲ್ಲಿ ಸಮಾಜದಲ್ಲಿ ಶಾಂತಿ ಮತ್ತು ಸುವ್ಯವಸ್ಥೆ ಕಾಪಾಡುವ ಪೊಲೀಸರು ರೌಡಿಗಳ ಪೆರೇಡ್ ನಡೆಸಿದರು.

ರೌಡಿ ಪಟ್ಟಿಯಲ್ಲಿರುವ ರೌಡಿಗಳನ್ನು ಠಾಣೆಗೆ ಕರೆತಂದು ಯಾವುದೇ ಅಪರಾಧ ಕೃತ್ಯಗಳಲ್ಲಿ ಭಾಗಿಯಾಗದೆ ಮುಂದಿನ ಜೀವನ ಸಾಗಿಸುವಂತೆ ಪೊಲೀಸರು ಎಚ್ಚರಿಕೆ ನೀಡಿದರು.

ಇನ್ನು ಸ್ವಚ್ಛ ಭಾರತ್ ಅಭಿಯಾನದಡಿ ಅತ್ತಿಬೆಲೆಯ ಪ್ರಮುಖ ರಸ್ತೆಗಳಲ್ಲಿ ಗಿಡ ಗಂಟೆಗಳು ಹಾಗೂ ಪ್ಲಾಸ್ಟಿಕ್ ತ್ಯಾಜ್ಯವನ್ನು ರೌಡಿಶೀಟರ್‌ಗಳ ಕೈಯಲ್ಲೇ ಸ್ವಚ್ಛಮಾಡಿಸುವ ಮೂಲಕ ರೌಡಿಗಳಲ್ಲಿ ಪರಿಸರ ಜಾಗೃತಿ ಮೂಡಿಸಿದರು.ಇವರೊಂದಿಗೆ ಪೊಲೀಸರು ಕೂಡಾ ಸ್ವಚ್ಛ ಮಾಡುವ ಮೂಲಕ ಎಲ್ಲರ ಗಮನ ಸೆಳೆದರು.

ಈ ವೇಳೆ ಮಾತನಾಡಿದ ಅತ್ತಿಬೆಲೆ ವೃತ್ತನಿರೀಕ್ಷಕ ರಾಜೇಶ್, ತಿಳಿದೋ ತಿಳಿಯದೆಯೋ ಅಪರಾಧವೆಸಗಿ ರೌಡಿ ಪಟ್ಟ ಕಟ್ಟಿಕೊಂಡಿರುವ ಇವರು ಮುಂದಿನ ದಿನಗಳಲ್ಲಿ ಸಮಾಜದಲ್ಲಿ ಎಲ್ಲರಂತೆ ಬಾಳಲಿ ಎಂದು ನಮ್ಮ ಆಶಯ ಎಂದು ಹಾರೈಸಿದರು. ಅಲ್ಲದೆ ಕೆಲಸ ಇಲ್ಲದ ರೌಡಿಶೀಟರ್‌ಗಳಿಗೆ ಕೆಲಸ ಕೊಡಿಸುತ್ತೇನೆ ಎಂದು ಭರವಸೆ ನೀಡಿದರು.
ಟ್ಟಿನಲ್ಲಿ ಅತ್ತಿಬೆಲೆ ವೃತ್ತ ನಿರೀಕ್ಷಕ ಎಲ್.ವೈ. ರಾಜೇಶ್ ನೇತೃತ್ವದಲ್ಲಿ ಆನೇಕಲ್ ಅತ್ತಿಬೆಲೆ ಪೋಲಿಸ್ ಠಾಣಾ ವಾಪ್ತಿಯ ಸುಮಾರು ೩೦ಕ್ಕೂ ಹೆಚ್ಚು ರೌಡಿಶೀಟರ್‌ಗಳು ಪೆರೇಡ್‌ನಲ್ಲಿ ಭಾಗವಹಿಸಿದ್ದರು.

Comments are closed.