ಕರ್ನಾಟಕ

ಕುಡಿದು ವಾಹನ ಚಾಲನೆ: 918 ಪ್ರಕರಣ

Pinterest LinkedIn Tumblr

vanಬೆಂಗಳೂರು, ಜು. ೧೭ – ನಗರದ ವಿವಿಧೆಡೆ ನಿನ್ನೆ ರಾತ್ರಿಯಿಡೀ ಕಾರ್ಯಾಚರಣೆ ನಡೆಸಿರುವ ಸಂಚಾರ ಪೊಲೀಸರು ಪಾನಮತ್ತರಾಗಿ ವಾಹನ ಚಲಾಯಿಸುತ್ತಿದ್ದ 918 ಮಂದಿ ಚಾಲಕರನ್ನು ಪತ್ತೆಹಚ್ಚಿದ್ದಾರೆ.

ರಾತ್ರಿ 9 ರಿಂದ ಇಂದು ಮುಂಜಾನೆ 2ರವರೆಗೆ ನಗರದ ವಿವಿಧ ಬಡಾವಣೆಗಳಲ್ಲಿ ಕಾರ್ಯಾಚರಣೆ ನಡೆಸಿದ ಸಂಚಾರ ಪೊಲೀಸರು ಕುಡಿದು ವಾಹನ ಚಲಾಯಿಸಿದ್ದ 918 ಮಂದಿ ಚಾಲಕರನ್ನು ಪತ್ತೆಹಚ್ಚಿ ಪ್ರಕರಣ ದಾಖಲಿಸಿ ವಾಹನಗಳನ್ನು ವಶಪಡಿಸಿಕೊಂಡಿದ್ದಾರೆ.

ಪಶ್ಚಿಮ ವಿಭಾಗದ ಪೊಲೀಸ್ ಠಾಣೆಗಳ ವ್ಯಾಪ್ತಿಯಲ್ಲಿ 438, ಪೂರ್ವ ವಿಭಾಗದಲ್ಲಿ 415 ಹಾಗೂ ಉತ್ತರ ವಿಭಾಗದಲ್ಲಿ 65 ಪಾನಮತ್ತ ಚಾಲಕರ ಪ್ರಕರಣಗಳನ್ನು ದಾಖಲಿಸಲಾಗಿದ್ದು, ಅವರುಗಳ ಚಾಲನಾ ಪರವಾನಗಿ ಪತ್ರವನ್ನು ಅಮಾನತುಪಡಿಸಿಕೊಳ್ಳಲಾಗಿದೆ ಎಂದು ಸಂಚಾರ ಪೊಲೀಸರು ತಿಳಿಸಿದ್ದಾರೆ.

Comments are closed.