ಕರ್ನಾಟಕ

ಬಿಜೆಪಿಯವರಿಗೆ ಸಿಬಿಐ ಕಂಡರೆ ಭಯ; ಕಾಂಗ್ರೆಸ್ 8 ಪ್ರಕರಣಗಳನ್ನು ಸಿಬಿಐಗೆ ನೀಡಿದೆ: ಸಿಎಂ

Pinterest LinkedIn Tumblr

cm-okಬೆಂಗಳೂರು: ಕಾಂಗ್ರೆಸ್ ಸರ್ಕಾರ ಕಳೆದ ಮೂರು ವರ್ಷಗಳಲ್ಲಿ ಎಂಟು ಪ್ರಕರಣಗಳನ್ನು ಸಿಬಿಐಗೆ ವಹಿಸಿದೆ. ನಮಗೆ ಸಿಬಿಐ ಮೇಲೆ ಭಯ ಇಲ್ಲ ಎಂದು ಸಿದ್ದರಾಮಯ್ಯ ಹೇಳಿದರು.

ಗಣಪತಿ ಆತ್ಮಹತ್ಯೆ ಪ್ರಕರಣದ ಕುರಿತು ವಿಧಾನಸಭೆಯಲ್ಲಿ ಉತ್ತರ ನೀಡಿದ ಸಿದ್ದರಾಮಯ್ಯ, ‘ಬಿಜೆಪಿ ಅಧಿಕಾರದಲ್ಲಿದ್ದಾಗ ಒಂದೂ ಪ್ರಕರಣಗಳನ್ನು ಸಿಬಿಐಗೆ ವಹಿಸಿಲ್ಲ. ನಿಮ್ಮ ಅವಧಿಯಲ್ಲಿ ಗಣಿ ಹಗರಣ ನಡೆಯಿತು. ಕೋಟ್ಯಂತರ ರೂಪಾಯಿ ಲೂಟಿಯಾಯಿತು. ಆದರೂ ಪ್ರಕರಣವನ್ನು ಸಿಬಿಐಗೆ ನೀಡಲಿಲ್ಲ’ ಎಂದರು.

ಇದಕ್ಕೆ ಪ್ರತಿಕ್ರಿಯಿಸಿದ ಅಪ್ಪಚ್ಚು ರಂಜನ್‌ ಈ ಪ್ರಕರಣವನ್ನು ಸಿಬಿಐಗೆ ವಹಿಸಿ ಎಂದು ಆಗ್ರಿಹಿಸಿದರು.

ಮುಂದುವರೆದು ಮಾತನಾಡಿದ ಸಿದ್ದರಾಮಯ್ಯ ಡಿ.ಕೆ.ರವಿ ಪ್ರಕರಣವನ್ನು ಸಿಬಿಐಗೆ ವಹಿಸಿದ್ದೇವೆ ಎಂದರು. ಈ ವೇಳೆ ಮಾತನಾಡಿದ ಜಗದೀಶ ಶೆಟ್ಟರ್, ಎಲ್ಲ ಸಾಕ್ಷ್ಯ ನಾಶ ಮಾಡಿ ಪ್ರಕರಣವನ್ನು ಸಿಬಿಐಗೆ ವಹಿಸಲಾಗಿದೆ ಎಂದು ದೂರಿದರು.

ಇದರಿಂದ ಆಕ್ರೋಶಗೊಂಡ ಸಿದ್ದರಾಮಯ್ಯ ಸಾಕ್ಷ್ಯ ನಾಶ ಮಾಡುವುದು ನಿಮ್ಮ ಕೆಲಸ ಎಂದರು. ಸಾಕ್ಷ್ಯ ನಾಶ ಮಾಡಿದ್ದೇವೆ ಎನ್ನುವುದಕ್ಕೆ ನಿಮ್ಮ ಬಳಿ ಸಾಕ್ಷಾಧಾರ ಇದೆಯೇ ಎಂದು ಆರೋಗ್ಯ ಸಚಿವ ರಮೇಶ್‌ಕುಮಾರ್ ಅವರು ಮುಖ್ಯಮಂತ್ರಿಗಳ ನೆರವಿಗೆ ನಿಂತರು.

ಶೆಟ್ಟರ್‌ ಅವರ ಹೇಳಿಕೆಯನ್ನು ಕಡತದಿಂದ ತೆಗೆದುಹಾಕುವಂತೆ ಸಭಾಧ್ಯಕ್ಷರಿಗೆ ಮನವಿ ಮಾಡಿದರು. ಈ ವೇಳೆ ವಿರೋಧ ಪಕ್ಷದ ಸದಸ್ಯರು ಸಹ ಮುಖ್ಯಮಂತ್ರಿಗಳ ಹೇಳಿಕೆಯನ್ನು ಕಡತದಿಂದ ತೆಗೆದುಹಾಕುವಂತೆ ಆಗ್ರಹಿಸಿದರು.

ಸಾವು, ಆತ್ಮಹತ್ಯೆ ಯಾವುದೇ ಸಮಸ್ಯೆಗೆ ಪರಿಹಾರ ಅಲ್ಲ: ‘ಇಬ್ಬರು ಆತ್ಮಹತ್ಯೆಗೆ ಶರಣಾಗಿದ್ದಾರೆ. ಸರ್ಕಾರದ ಜೀವನದಲ್ಲಿ ಅನೇಕ ಕಷ್ಟಗಳು ಬರುತ್ತವೆ. ಅವುಗಳನ್ನು ಧೈರ್ಯದಿಂದ ಎದುರಿಸಬೇಕು ಎಂದು ಸಿದ್ದರಾಮಯ್ಯಹೇಳಿದರು.

ಯಾವುದಕ್ಕೂ ಸಮಸ್ಯೆಗೆ ಆತ್ಮಹತ್ಯೆ ಪರಿಹಾರ ಅಲ್ಲ. ಮೃತ ಡಿವೈಎಸ್‌ಪಿಗಳ ಕುಟುಂಬಗಳಿಗೆ ದುಃಖವನ್ನು ಭರಿಸು ಶಕ್ತಿಯನ್ನು ದೇವರು ನೀಡಲಿ ಎಂದು ಬೇಡುತ್ತೇನೆ’ ಎಂದು ಹೇಳಿದರು.

ಗಣಪತಿ ಅವರು ಆತ್ಮಹತ್ಯೆಗೂ ಮುನ್ನ ಜುಲೈ 7ರಂದು ಬೆಳಿಗ್ಗೆ 11.30ರಿಂದ 1.30ರವೆಗೆ ಖಾಸಗಿ ಸುದ್ದಿವಾಹಿನಿಗೆ ಸಂದರ್ಶನ ನೀಡಿದ್ದಾರೆ. ಕೂಡಲೇ ಮಾಧ್ಯಮದವರು ಗಣಪತಿ ಅವರ ಕುಟುಂಬಕ್ಕೆ ಅಥವಾ ಪೊಲೀಸರಿಗೆ ವಿಷಯ ತಿಳಿಸಿದ್ದರೆ ಅವರ ಸಾವನ್ನು ತಪ್ಪಿಸಬಹುದಿತ್ತು ಎಂದರು.

1994ರಲ್ಲಿ ಎಸ್‌ಐ ಆಗಿ ಸೇವೆಗೆ ಸೇರಿದ ಗಣಪತಿ ಅವರು ವಿವಿಧ ಕಡೆ ಕರ್ತವ್ಯ ನಿರ್ವಹಿಸಿದ್ದು, 22 ವರ್ಷ ಅವರು ಸೇವೆ ಸಲ್ಲಿಸಿದ್ದಾರೆ. ಆದರೆ, ಕಿರುಕುಳದ ಕುರಿತು ಅವರು ಹಿರಿಯ ಅಧಿಕಾರಿಗಳಿಗೆ ಎಲ್ಲಿಯೂ ದೂರು ನೀಡಿಲ್ಲ ಎಂದು ಹೇಳಿದರು.

ಗಣಪತಿ ಅವರು ಆತ್ಮಹತ್ಯೆಗೂ ಮುನ್ನ ಜಾರ್ಜ್ ಅವರ ವಿರುದ್ಧ ಆರೋಪ ಮಾಡಿದ್ದಾರೆ. ಅವರು ಯಾಕೆ ಹಾಗೆ ಮಾಡಿದರೋ ಗೊತ್ತಿಲ್ಲ. 2008ರಲ್ಲಿ ಚರ್ಚ್ ಗಲಾಟೆ ನಡೆದಿದೆ. ಅದಾದ ಬಳಿಕ ಐದು ವರ್ಷಗಳ ನಂತರ ಜಾರ್ಜ್ ಸಚಿವರಾದರು. ಜಾರ್ಜ್ ಅವರು ಪೂರ್ವಗ್ರಹದಿಂದ ಗಣಪತಿ ಅವರಿಗೆ ಕಿರುಕುಳ ನೀಡಿದ್ದಾರೆ ಎನ್ನುವುದಕ್ಕೆ ಯಾವುದೇ ಪುರಾವೆ ಇಲ್ಲ ಎಂದರು.

Comments are closed.