ನವದೆಹಲಿ:ಆ ಶಬ್ದ ಡಿಕ್ಷನರಿಯಲ್ಲೂ ಇಲ್ಲ…ಹಾಗಾಗಿ ಠುಲ್ಲಾ ಶಬ್ದದ ಅರ್ಥದ ಬಗ್ಗೆ ವಿವರಣೆ ನೀಡಿ ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಗೆ ದೆಹಲಿ ಹೈಕೋರ್ಟ್ ಬುಧವಾರ ಕೇಳಿತ್ತು.
ಸ್ಥಳೀಯ ವಿಚಾರಣಾ ನ್ಯಾಯಾಲಯ ಕೇಜ್ರಿವಾಲ್ ಖುದ್ದು ಹಾಜರಾಗಬೇಕೆಂದು ನೀಡಿರುವ ಸಮನ್ಸ್ ಗೆ ತಡೆ ನೀಡಿರುವ ಹೈಕೋರ್ಟ್ ಪ್ರಕರಣದ ವಿಚಾರಣೆಯನ್ನು ಆಗಸ್ಟ್ 21ಕ್ಕೆ ಮುಂದೂಡಿದೆ.
ನೀವು ಬಳಸಿರುವ ಠುಲ್ಲಾ ಶಬ್ದ ನಮಗೆ ಡಿಕ್ಷನರಿಯಲ್ಲೂ ಸಿಕ್ಕಿಲ್ಲ. ಒಂದು ವೇಳೆ ನೀವು ಈ ಶಬ್ದ ಉಪಯೋಗಿಸಿದ್ದೇ ಹೌದಾದರೆ…ನಿಮಗೆ ಅದರ ಅರ್ಥ ತಿಳಿದಿರಲೇಬೇಕು ಎಂದು ಅರ್ಜಿ ವಿಚಾರಣೆ ವೇಳೆ ನ್ಯಾಯಾಧೀಶರು ಅಭಿಪ್ರಾಯವ್ಯಕ್ತಪಡಿಸಿದ್ದಾರೆ.
ಜವಾಬ್ದಾರಿಯುತ ಹುದ್ದೆಯಲ್ಲಿರುವ ಆಪ್ ನಾಯಕ ಕೇಜ್ರಿವಾಲ್ ಅವರು ದೆಹಲಿ ಪೋಲೀಸರನ್ನು “ಠುಲ್ಲಾ’ ಎಂಬುದಾಗಿ ಕರೆದು ಅವಹೇಳನ ಮಾಡಿದ್ದಾರೆ. ಈ ಮೂಲಕ ನಾಗರಿಕರ ರಕ್ಷಣೆಯಲ್ಲಿ ತೊಡಗಿರುವ ಪೊಲೀಸರಿಗೆ ಸಾರ್ವಜನಿಕವಾಗಿ ಅಪಮಾನ ಮಾಡಿದ್ದಾರೆ ಎಂದು ಕಳೆದ ಜುಲೈ 23 ರಂದು ಕೇಜ್ರಿ ವಿರುದ್ಧ ಪೇದೆ ಹರ್ವಿಂದರ್ ಮಾನನಷ್ಟ ಮೊಕದ್ದಮೆ ದಾಖಲಿಸಿದ್ದರು.
-ಉದಯವಾಣಿ
Comments are closed.