ಬೆಂಗಳೂರು,ಜು.೧೩-ಅರಸೀಕೆರೆ ರೈಲು ನಿಲ್ದಾಣದಲ್ಲಿ ರೈಲಿನ ಸಾಮಾನ್ಯ ಬೋಗಿಯ ಸೀಟಿನ ಕೆಳಗೆ ಮಲಗಿಸಿಹೋದ ಮೂರುವರೆ ತಿಂಗಳ ಗಂಡು ಮಗುವಿನ ವಾರಸುದಾರರು ಇನ್ನೂ ಪತ್ತೆಯಾಗಿಲ್ಲ.
ಕಳೆದ ಎಪ್ರಿಲ್ ೬ರ ಬೆಳಿಗ್ಗೆ ೧೧ಕ್ಕೆ ಅರಸೀಕೆರೆ ರೈಲು ನಿಲ್ದಾಣಕ್ಕೆ ಬಂದ ಬೆಂಗಳೂರು ಅರಸೀಕೆರೆ ಪುಷ್‌ಪುಲ್ ರೈಲಿನ ಸಾಮಾನ್ಯ ಬೋಗಿಯ ಸೀಟಿನ ಕೆಳಗೆ ೧೫ ದಿನಗಳ ಗಂಡುಮಗುವನ್ನು ಯಾರೋ ಟವಲ್‌ನಲ್ಲಿ ಸುತ್ತಿಬಿಟ್ಟು ಹೋಗಿದ್ದರು.
ಅದನ್ನು ರಕ್ಷಿಸಿದ ಅರಸೀಕೆರೆ ರೈಲ್ವೆ ಪೊಲೀಸರು ಅದನ್ನು ಹಾಸನದ ಪಬ್ಲಿಕ್ ಟಾರಿಟಬಲ್ ಟ್ರಸ್ಟ್‌ನ ಲಾಲನೆ ಪೋಷಣೆಗೆ ಕಳುಹಿಸಿ ಮಗುವಿನ ಪೋಷಕರಿಗಾಗಿ ಹುಡುಕಾಟ ನಡೆಸಿದರೂ ಇಲ್ಲಿಯವರಗೆ ಪತ್ತೆಯಾಗಿಲ್ಲ.
ಮಗುವಿಗೆ ಈಗ ಮೂರುವರೆ ತಿಂಗಳಾಗಿದ್ದು ಪೋಷಕರಾಗಲಿ ಸಂಬಂಧಿಕರಾಗಲಿ ಇದ್ದರೆ ಅರಸೀಕೆರೆ ರೈಲ್ವೆ ಪೊಲೀಸರನ್ನಾಗಲಿ ಇಲ್ಲವೇ ಪೊಲೀಸ್ ನಿಯಂತ್ರಣ ಕೊಠಡಿಯ ೨೨೮೭೧೨೯೧ ದೂರವಾಣಿಯನ್ನಾಗಲಿ ಸಂಪರ್ಕಿಸಬಹುದು
Comments are closed.