ಕರ್ನಾಟಕ

ಯಮಕನಮರಡಿಗೆ ಸಚಿವ ಜಾರಕಿಹೊಳಿ ಭೇಟಿ; ಮೃತ ವಿದ್ಯಾರ್ಥಿಗಳ ಕುಟುಂಬಕ್ಕೆ ಸಾಂತ್ವನ

Pinterest LinkedIn Tumblr

ramesh_visitಯಮಕನಕರಡಿ: ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲ್ಲೂಕಿನ ಯಮಕನಮರಡಿಯಲ್ಲಿ ಸೋಮವಾರ ಬೆಳಗ್ಗೆ ಸರಕಾರಿ ಹಿರಿಯ ಕನ್ನಡ ಹೆಣ್ಣು ಮಕ್ಕಳ ಶಾಲೆಯ ಕಟ್ಟಡ ಕುಸಿದು ಬಿದ್ದು ಮೃತಪಟ್ಟ 5 ನೇ ತರಗತಿ ವಿದ್ಯಾರ್ಥಿನಿಯರಾದ ಲಗಮವ್ವ ಬಸಪ್ಪ ಕಟ್ಟಿಮನಿ ಮತ್ತು ಶ್ವೇತಾ ಸತ್ಯಪ್ಪ ಕೋಳಿ ಅವರ ಮನೆಗೆ ಸಣ್ಣ ಕೈಗಾರಿಕಾ ಸಚಿವ ರಮೇಶ ಜಾರಕಿಹೊಳಿ ಭೇಟಿ ನೀಡಿದ್ದಾರೆ. ಮೃತ ಮಕ್ಕಳ ಪೋಷಕರಿಗೆ ಸಾಂತ್ವನ ಹೇಳಿದ ಸಚಿವರು ತಲಾ ರು. 4.5 ಲಕ್ಷ ಪರಿಹಾರ ಕೊಡಿಸುವುದಾಗಿ ಭರವಸೆ ನೀಡಿದ್ದು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಮಕ್ಕಳ ಆರೋಗ್ಯ ವಿಚಾರಣೆ ನಡೆಸಿದ್ದಾರೆ,

ಮೃತ ವಿದ್ಯಾರ್ಥಿಗಳ ಪಾಲಕರೊಂದಿಗೆ ಮಾತನಾಡಿದ ಸಚಿವರು ಶಿಥಿಲಗೊಂಡಿರುವ ಶಾಲೆಯ ಕೊಠಡಿಗಳನ್ನು ಕೆಡವಿ ಹೊಸದಾಗಿ ನಿರ್ಮಿಸಲಾಗುವುದು. ಈ ಸಂಬಂಧ ವರದಿ ಕೇಳಿದ್ದೇನೆ. ಜುಲೈ 16ರಂದು ಜಿಲ್ಲಾ ಮಟ್ಟದ ಅಧಿಕಾರಿಗಳ ಸಭೆ ನಡೆಸಿ ಮುಂದಿನ ಕ್ರಮ ಕೈಗೊಳ್ಳಲಾಗುವುದು.

ಮೃತ ಮಕ್ಕಳ ತಾಯಂದಿರಿಗೆ ಅಂಗನವಾಡಿಯಲ್ಲಿ ಕೆಲಸ ಕೊಡಿಸಲು ಪರಿಶೀಲಿಸಲಾಗುತ್ತದೆ ಎಂದಿದ್ದಾರೆ, ಆದಾಗ್ಯೂ, ಸಚಿವರದ್ದು ಮೃತರ ಕುಟುಂಬಗಳಿಗೆ ಪರಿಹಾರ ಕೊಡದೆ ಕೇವಲ ಸಾಂತ್ವನಕ್ಕಷ್ಟೆ ಸೀಮಿತವಾದ ಭೇಟಿಯಾಗಿತ್ತು.

ಶಿಕ್ಷಕರ ನಿರ್ಲಕ್ಷ್ಯ: ಶಾಲೆ ಕೊಠಡಿ ಶಿಥಿಲಗೊಂಡಿದ್ದರೂ ಸ್ಥಳಾಂತರಿಸಲು ಶಿಕ್ಷಕರು ನಿರ್ಲಕ್ಷ್ಯ ವಹಿಸಿದ್ದರು ಎಂದು ಪೋಷಕರು ಆರೋಪಿಸಿದ್ದು, ಮೃತರ ಕುಟುಂಬಕ್ಕೆಹೆಚ್ಚಿನ ಪರಿಹಾರ ನೀಡುವಂತೆ ಸ್ಥಳೀಯರ ಆಗ್ರಹಿಸಿದ್ದಾರೆ.

Comments are closed.