ವಿಶ್ವಸಂಸ್ಥೆ(ಪಿಟಿಐ): ಕಾಶ್ಮೀರದಲ್ಲಿ ನಡೆಯುತ್ತಿರುವ ಹಿಂಸಾಚಾರ ಹಾಗೂ ಘಟನೆಯಲ್ಲಿ ಸಂಭವಿಸಿರುವ ಸಾವು ನೋವಿಗೆ ವಿಷಾದ ವ್ಯಕ್ತಪಡಿಸಿರುವ ವಿಶ್ವ ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಬಾನ್ ಕೀ ಮೂನ್ ಅವರು, ಮತ್ತೆ ಇಂಥ ಹಿಂಸಾಚಾರ ಮರುಕಳಿಸದಂತೆ ಹೆಚ್ಚಿನ ಸಂಯಮ ವಹಿಸಿ ಎಂದು ಕರೆ ನೀಡಿದ್ದಾರೆ.
ಹಿಜ್ಬುಲ್ ಕಮಾಂಡರ್ ಬುರ್ಹಾನ್ ವಾನಿ ಹತ್ಯೆ ಬಳಿಕ ಕಾಶ್ಮೀರ ಕಣಿವೆಯಲ್ಲಿ ಹಿಂಸಾಚಾರ ನಡೆದು 20ಕ್ಕೂ ಹೆಚ್ಚು ಜನ ಸಾವಿಗೀಡಾಗಿ, ಭದ್ರತಾ ಸಿಬ್ಬಂದಿ ಸೇರಿದಂತೆ 250 ಜನ ಗಾಯಗೊಂಡಿರುವ ಸಂಗತಿಯನ್ನು ಗಮನಿಸಿರುವ ಬಾನ್ ಕೀ ಮೂನ್ ಅವರು ವಿಷಾದ ವ್ಯಕ್ತಪಡಿಸಿದ್ದಾರೆ ಎಂದು ಬಾನ್ ಕೀ ಮೂನ್ ಅವರ ವಕ್ತಾರ ಸ್ಟೀಫನ್ ಡುಜರಿಕ್ ಅವರು ತಿಳಿಸಿದ್ದಾರೆ.
ಹೆಚ್ಚಿನ ತಾಳ್ಮೆ ಹಾಗೂ ಸಂಯಮದಿಂದ ನಡೆದುಕೊಂಡು ಮತ್ತೆ ಇಂಥ ಘಟನೆ ಮರುಕಳಿಸದಂತೆ ನೋಡಿಕೊಂಡು ಶಾಂತಿಯುತವಾಗಿ ಬಗೆಹರಿಸಿಕೊಳ್ಳಬೇಕು ಎಂದು ಮೂನ್ ಅವರು ಹೇಳಿದ್ದಾಗಿ ವಕ್ತಾರರು ತಿಳಿಸಿದ್ದಾರೆ.
Comments are closed.