ಬೆಂಗಳೂರು:ಬೆಂಗಳೂರು ನಗರ ಲೋಕಾಯುಕ್ತ ಎಸ್ಪಿಯಾಗಿ ಭ್ರಷ್ಟರಿಗೆ ನಡುಕ ಹುಟ್ಟಿಸಿದ್ದ ದಿಟ್ಟ ಅಧಿಕಾರಿ ಮಧುಕರ್ ಶೆಟ್ಟಿ ಅವರನ್ನು ಪೊಲೀಸ್ ನೇಮಕಾತಿ ಡಿಐಜಿಯನ್ನಾಗಿ ನೇಮಕ ಮಾಡುವ ಮೂಲಕ ಇಲಾಖೆಗೆ ವಾಪಸ್ ಆಗಿದ್ದಾರೆ.
ಈ ಹಿಂದೆ ಶಾಸಕ ವೈ ಸಂಪಂಗಿಯನ್ನು ಶಾಸಕರ ಭವನದಲ್ಲೇ ಬಂಧಿಸಿ ಸುದ್ದಿಯಾಗಿದ್ದರು. ಬಿಬಿಎಂಪಿ ಸದಸ್ಯ ಗೋವಿಂದರಾಜುವನ್ನು ಬಂಧಿಸಿ ಶಾಕ್ ಕೊಟ್ಟಿದ್ದ ಮಧುಕರ್ ಶೆಟ್ಟಿ ಲೋಕಾಯುಕ್ತ ಇಲಾಖೆಯಲ್ಲಿ ಸಕ್ರಿಯರಾಗಿದ್ದರು.
ತದನಂತರ ಮಧುಕರ್ ಅವರು ಪಿಎಚ್ ಡಿ ಸಂಶೋಧನೆಗಾಗಿ 2 ವರ್ಷಗಳ ಅಧ್ಯಯನ ರಜೆ ಪಡೆದುಕೊಂಡು ಅಮೆರಿಕಕ್ಕೆ ತೆರಳಿದ್ದರು. ಲೋಕಾಯುಕ್ತದೊಳಗಿನ ಅವ್ಯವಸ್ಥೆಗೆ ಬೇಸತ್ತು ಮಧುಕರ್ ಸುದೀರ್ಘ ರಜೆ ಮೇಲೆ ತೆರಳಿರುವುದಾಗಿ ಮಾಧ್ಯಮಗಳಲ್ಲಿ ವರದಿಯಾಗಿತ್ತು.
ಹಿರಿಯ ಪತ್ರಕರ್ತ, ದಿವಂಗತ ವಡ್ಡರ್ಸೆ ರಘುರಾಮ ಶೆಟ್ಟಿ ಅವರ ಪುತ್ರರಾಗಿರುವ ಮಧುಕರ್ ಶೆಟ್ಟಿ 1999ನೇ ಸಾಲಿನ ಐಪಿಎಸ್ ಅಧಿಕಾರಿ. 2008ರ ನವೆಂಬರ್ ನಲ್ಲಿ ಅವರು ಲೋಕಾಯುಕ್ತ ಸಂಸ್ಥೆಗೆ ಆಗಮಿಸಿದ್ದರು. 2011ರಲ್ಲಿ ಅಮೆರಿಕಕ್ಕೆ ತೆರಳಿದ್ದರು.
-ಉದಯವಾಣಿ
Comments are closed.