ಕರ್ನಾಟಕ

ಡಿವೈಎಸ್ಪಿ ಗಣಪತಿ ಆತ್ಮಹತ್ಯೆ: ಸೊಸೆ ವಿರುದ್ಧ ನಾನು ದೂರು ನೀಡಿಲ್ಲ

Pinterest LinkedIn Tumblr

Dysp_ganapatiಮಡಿಕೇರಿ: ಆತ್ಮಹತ್ಯೆ ಮಾಡಿಕೊಂಡಿರುವ ಮಂಗಳೂರು ಡಿವೈಎಸ್ಪಿ ಎಂಕೆ ಗಣಪತಿ ಪತ್ನಿ ಪಾವನಾ ವಿರುದ್ಧ ನಾನು ದೂರು ನೀಡಿಲ್ಲ ಎಂದು ಗಣಪತಿ ಅವರ ಅಪ್ಪ ಕುಶಾಲಪ್ಪ ಹೇಳಿದ್ದಾರೆ.

‘ಸೊಸೆ ಪಾವನಾ ಅವರು ಮಗನನ್ನು ಚೆನ್ನಾಗಿ ನೋಡಿಕೊಳ್ಳುತ್ತಿರಲಿಲ್ಲ. ಸಂಸಾರದಲ್ಲಿ ಭಿನ್ನಾಭಿಪ್ರಾಯಗಳಿದ್ದವು. ಇದರಿಂದ ಮಗ ಖಿನ್ನತೆಗೆ ಒಳಗಾಗಿದ್ದ’ ಎಂದು ಕುಶಾಲಪ್ಪ ಮಡಿಕೇರಿ ನಗರ ಠಾಣೆಗೆ ದೂರು ನೀಡಿದ್ದರು ಎಂಬ ಸುದ್ದಿ ಗಣಪತಿ ಆತ್ಮಹತ್ಯೆ ಪ್ರಕರಣದಲ್ಲಿ ಕೇಳಿ ಬಂದಿತ್ತು.

ಈ ಬಗ್ಗೆ ಶನಿವಾರ ಟಿವಿ9 ವಾಹಿನಿಗೆ ಪ್ರತಿಕ್ರಿಯಿಸಿದ ಕುಶಾಲಪ್ಪ, ನಾನು ಈ ರೀತಿ ಯಾವುದೇ ದೂರು ನೀಡಿಲ್ಲ. ನಾನು ಯಾವುದೇ ರೀತಿಯ ದೂರನ್ನೂ ಬರೆದುಕೊಟ್ಟಿಲ್ಲ. ದೂರಿನ ಪ್ರತಿಯೊಂದಕ್ಕೆ ಸಹಿ ಹಾಕಿದ್ದೇನೆ. ಆದರೆ ಅದರಲ್ಲಿ ಏನು ಬರೆದಿತ್ತು ಎಂಬುದನ್ನು ಓದಿ ನೋಡಿಲ್ಲ ಎಂದಿದ್ದಾರೆ.

ಗಣಪತಿ ಅವರ ಸಂಸಾರದಲ್ಲಿ ಸಮಸ್ಯೆ ಇತ್ತೇ? ಎಂದು ಕೇಳಿದಾಗ, ಅವರು ಗಂಡ-ಹೆಂಡತಿ ಚೆನ್ನಾಗಿಯೇ ಇದ್ದರು. ಆದರೆ ಅವರ ಮನಸ್ಸಿನೊಳಗೇನಿತ್ತು ಎಂಬುದು ನನಗೆ ಗೊತ್ತಿಲ್ಲ. ವರ್ಷಕ್ಕೊಮ್ಮೆ ಅವರು ಮನೆಗೆ ಬರುತ್ತಿದ್ದರು. 2 ತಿಂಗಳ ಹಿಂದೆಯಷ್ಟೇ ಅವನು ಮನೆಗೆ ಬಂದಿದ್ದ ಎಂದು ಹೇಳಿದ್ದಾರೆ.

Comments are closed.