ಬೆಂಗಳೂರು, ಜು. ೮ – ಆನೆದಂತಗಳನ್ನು ಮಾರಾಟ ಮಾಡಲು ಯತ್ನಿಸುತ್ತಿದ್ದ ಐವರು ಕಳ್ಳರನ್ನು ಬಸವನಗುಡಿ ಪೊಲೀಸರು ಬಂಧಿಸಿ 40 ಕೆಜಿ ತೂಕದ 2 ವಿದೇಶಿ ಆನೆದಂತಗಳನ್ನು ವಶಪಡಿಸಿಕೊಂಡಿದ್ದಾರೆ.
ಕೆಆರ್‌ಪುರಂನ ಲೋಕೇಶ್ವರ್ ಅಲಿಯಾಸ್ ಲೋಕೇಶ್ವರ ರಾವ್ (28), ವೈಟ್ ಫೀಲ್ಡ್‌ನ ವಿಕ್ಟರ್ ಆಂಥೋಣಿ (49), ರಾಮಮೂರ್ತಿ ನಗರದ ಜಯಪ್ರಕಾಶ್ (42), ಬಾಣಸವಾಡಿಯ ಕಾರ್ತಿಕ್ (21), ಕುಂಬೇನ ಅಗ್ರಹಾರದ ರಾಜು (33) ಬಂಧಿತ ಆರೋಪಿಗಳಾಗಿದ್ದಾರೆ.
ಆರೋಪಿ ಲೋಕೇಶ್ ಬುಲ್ ಟೆಂಪರ್ ರಸ್ತೆಯ ದೊಡ್ಡ ಗಣಪತಿ ದೇವಾಲಯದ ಬಳಿ ತನ್ನ ಮೊಬೈಲ್‌ನಲ್ಲಿ ಆನೆ ದಂತಗಳಿರುವ ಫೋಟೊಗಳನ್ನು ತೋರಿಸಿ ಮಾರಾಟ ಮಾಡಲು ಯತ್ನಿಸುತ್ತಿದ್ದಾಗ ಕಾರ್ಯಾಚರಣೆ ನಡೆಸಿದ ಬಸವನಗುಡಿ ಪೊಲೀಸರಿಗೆ ಸಿಕ್ಕಿಬಿದ್ದಿದ್ದಾನೆ.
ಆತ ನೀಡಿದ್ದ ಮಾಹಿತಿ ಆಧರಿಸಿ ಉಳಿದ ನಾಲ್ವರು ಆರೋಪಿಗಳನ್ನು ಬಂಧಿಸಿ 40 ಕೆಜಿ ತೂಕದ ಎರಡು ವಿದೇಶಿ ಆನೆದಂತಗಳನ್ನು ವಶಪಡಿಸಿಕೊಂಡು ಬಸವನಗುಡಿ ಪೊಲೀಸರು ತನಿಖೆ ಕೈಗೊಂಡಿದ್ದಾರೆ ಎಂದು ಡಿಸಿಪಿ ಶರಣಪ್ಪ ಅವರು ತಿಳಿಸಿದ್ದಾರೆ.
Comments are closed.