ಮನೋರಂಜನೆ

ಡ್ಯಾನ್ಸಿಂಗ್ ಸ್ಟಾರ್‌ನಲ್ಲಿ ಜೂಹಿ ಚಾವ್ಲಾ!

Pinterest LinkedIn Tumblr

Dancing-Star_106ZÀ®gÀ’ಹೆಜ್ಜೆಗಳ ಜೊತೆ ಹಾರ್ಟನ್ನೂ ಕುಣಿಸೋ ರಿಯಾಲಿಟಿ ಶೋ’ ಡ್ಯಾನ್ಸಿಂಗ್ ಸ್ಟಾರ್ ಮೂರನೇ ಸೀಸನ್ ಇದೇ ಜುಲೈ  ಇಂದು ರಾತ್ರಿ ೯ಕ್ಕೆ ಕಲರ್ಸ್ ಕನ್ನಡದಲ್ಲಿ ಆರಂಭವಾಗಲಿದೆ.

ಕ್ರೇಜಿ ಸ್ಟಾರ್ ರವಿಚಂದ್ರನ್, ಮಯೂರಿ ಉಪಾಧ್ಯ ಹಾಗೂ ಪ್ರಿಯಾಮಣಿ. ಡ್ಯಾನ್ಸಿಂಗ್ ಸ್ಟಾರ್- ೩ ತೀರ್ಪುಗಾರರಾಗಿ ಮುಂದುವರೆದಿದ್ದಾರೆ ಆದರೆ ನಿರೂಪಕ ಅಕುಲ್ ಬಾಲಾಜಿ ಬದಲಾಗಿದ್ದಾರೆ. ಆರಂಭದ ಎಪಿಸೋಡ್‌ನಲ್ಲಿ ನಟಿ ಜೂಹಿ ಚಾವ್ಲಾ ಭಾಗವಹಿಸಿದ್ದಾರೆ.

ಈ ಬಾರಿಯ ಡ್ಯಾನ್ಸಿಂಗ್ ಸ್ಟಾರ್‌ನಲ್ಲಿ ೧೨ ಸೆಲೆಬ್ರಿಟಿ ಸ್ಫರ್ಧಿಗಳಿರುತ್ತಾರೆ. ವಿವಿಧ ಕ್ಷೇತ್ರಗಳಲ್ಲಿ ಹೆಸರು ಮಾಡಿರುವ ಈ ಸೆಲೆಬ್ರೆಟಿಗಳ ಜೊತೆಗೆ ಒಬ್ಬೊಬ್ಬ ನೃತ್ಯ ನಿರ್ದೇಶಕರು ಇರುತ್ತಾರೆ. ಹದಿನಾಲ್ಕು ವಾರಗಳ ಕಾಲ ನಡೆಯುವ ಈ ಸ್ಫರ್ಧೆಯಲ್ಲಿ ವಾರಕ್ಕೊಬ್ಬರಂತೆ ಸ್ಫರ್ಧಿಗಳು ಎಲಿಮಿನೇಟ್ ಆಗುತ್ತಾ ಹೋಗುತ್ತಾರೆ. ಕೊನೆಗೆ ಉಳಿಯುವವರು ’ಡ್ಯಾನ್ಸಿಂಗ್ ಸ್ಟಾರ್’ ಆಗುತ್ತಾರೆ.

“ಇತ್ತೀಚೆಗೆ ಯಾವ ಚಾನೆಲ್ ನೋಡಿದರೂ ಡ್ಯಾನ್ಸ್ ಕಾರ್ಯಕ್ರಮಗಳೇ ಕಾಣಿಸುತ್ತಿವೆ. ಡ್ಯಾನ್ಸಿಂಗ್ ಸ್ಟಾರ್‌ನ ಜನಪ್ರಿಯತೆಯನ್ನು ಎಲ್ಲರೂ ಅನುಕರಿಸಲು ಬಯಸುತ್ತಾರೆ.

ಆದರೆ ಡ್ಯಾನ್ಸಿಂಗ್ ಸ್ಟಾರೇ ಬೇರೆ, ಇತರ ಡ್ಯಾನ್ಸ್ ಶೋಗಳೇ ಬೇರೆ ಎಂದು ಕನ್ನಡ ಟೆಲಿವಿಷನ್ ವೀಕ್ಷಕರಿಗೆ ಈಗಾಗಲೇ ಗೊತ್ತಿದೆ. ಈ ಸೀಸನ್ ಕೂಡಾ ವೀಕ್ಷಕರ ನಿರೀಕ್ಷೆಗೆ ತಕ್ಕಂತೆಯೇ ಇರುತ್ತದೆ ಎನ್ನುತ್ತಾರೆ ರವಿಚಂದ್ರನ್.

“ಡ್ಯಾನ್ಸ್ ಕಾರ್ಯಕ್ರಮದಲ್ಲಿ ನೃತ್ಯದ ಮೌಲ್ಯಮಾಪನ ಮಾತ್ರವಲ್ಲದೆ ಅದನ್ನು ತುಲನೆ ಮಾಡುವ ತೀರ್ಪುಗಾರರನ್ನೂ ಜನರು ತುಲನೆ ಮಾಡುತ್ತಾರೆ. ಈ ಅಂಶಗಳನ್ನೆಲ್ಲ ಗಣನೆಗೆ ತೆಗೆದುಕೊಂಡೇ ಈ ಕೆಲಸಕ್ಕೆ ಕೈ ಹಾಕಿದ್ದೇವೆ.

ಕಳೆದ ಸೀಸನ್ ನಲ್ಲಿ ನಮ್ಮ ಕೆಲಸವನ್ನು ನೋಡಿ ವೀಕ್ಷಕರು ಮೆಚ್ಚಿದ್ದಾರೆ. ಅವರ ನಿರೀಕ್ಷೆಯನ್ನು ನಾವು ಹುಸಿ ಮಾಡುವುದಿಲ್ಲ ಎಂದರು ಮಯೂರಿ ಉಪಾಧ್ಯ
ಪ್ರ್ರಿಯಾಮಣಿ “ತಮ್ಮ ಎಲ್ಲ ಕೆಲಸ ಬಿಟ್ಟು ಡ್ಯಾನ್ಸಿಂಗ್ ಸ್ಟಾರ್ ನೋಡಲು ಕುಳಿತುಕೊಳ್ಳುವ ವೀಕ್ಷಕರು ಗರಿಷ್ಠ ಮನರಂಜನೆ ನಿರೀಕ್ಷಿಸುತ್ತಾರೆ.

ವೇದಿಕೆಯ ಮೇಲೆ ಬಂದು ಕುಣಿದು ಹೋಗುವುದಷ್ಟೇ ಡ್ಯಾನ್ಸ್ ಶೋ ಅಲ್ಲ. ನಮ್ಮ ಶೋ ’ಅದಕ್ಕೂ ಮೇಲೆ.’ ಆದ್ದರಿಂದಲೇ ಇದು ಇಷ್ಟೊಂದು ಯಶಸ್ಸು ಗಳಿಸಿದೆ ಎನ್ನುತ್ತಾರೆ.

ಜನರಿಗೆ ನಮ್ಮ ಮೇಲೆ ಇರುವ ನಿರೀಕ್ಷೆಗೆ ತಕ್ಕಂತ ಕಾರ್ಯಕ್ರಮ ಮಾಡಬೇಕು ಎಂದು ನಮ್ಮ ತಂಡ ಹಗಳಿರುಳು ದುಡಿಯುತ್ತದೆ. ಸ್ಪರ್ಧಿಗಳು ಮತ್ತು ಕೊರಿಯೋಗ್ರಫರ್ ಗಳ ಆಯ್ಕೆಯಿಂದ ಆರಂಭವಾಗಿ ಕಾರ್ಯಕ್ರಮದ ಸೆಟ್, ಪರ್ಫಾರ್ಮೆನ್ಸ್ ಹೀಗೆ ಪ್ರತಿಯೊಂದು ವಿಷಯದ ಬಗ್ಗೆಯೂ ಆಳವಾದ ಆಧ್ಯಯನ ಮಾಡಿ, ಅಳೆದು ತೂಗಿ ನಿರ್ಧಾರ ತೆಗೆದುಕೊಂಡಿರುತ್ತೇವೆ ಕಲರ್ಸ್ ಕನ್ನಡದ ಬ್ಯುಸಿನೆಸ್ ಹೆಡ್ ಪರಮೇಶ್ವರ ಗುಂಡ್ಕಲ್.

Comments are closed.