ಬೆಂಗಳೂರು, ಜು.6: ಡಿ.ವಿ.ಸದಾನಂದ ಗೌಡ ಅವರು ಅದಕ್ಷರಾಗಿರುವುದರಿಂದಲೇ ಅವರಿಗೆ ಮಹತ್ವವಿಲ್ಲದ ಖಾತೆ ದೊರಕಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರತಿಕ್ರಿಯಿಸಿದ್ದಾರೆ.
ನಗರದ ಜನಾರ್ದನ ಹೋಟೆಲ್‍ನಲ್ಲಿಂದು ತಮ್ಮ ಸಂಗಡಿಗರೊಂದಿಗೆ ಉಪಹಾರ ಸೇವಿಸಿದ ಬಳಿಕ ಸುದ್ದಿಗಾರರು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿ, ಸದಾನಂದ ಗೌಡ ಅವರು ಸೇರಿದಂತೆ ಬಿಜೆಪಿಯಲ್ಲಿರುವವರೆಲ್ಲರೂ ಅದಕ್ಷರೇ ಆಗಿದ್ದಾರೆ ಎಂದು ಹೇಳಿದರು.
ಗೌಡರು ಅದಕ್ಷರಾಗಿರುವುದರಿಂದ ಅವರಿಗೆ ಕಳಪೆ ಖಾತೆ ಕೊಟ್ಟಿದ್ದಾರೆ. ಈ ಹಿಂದೆ ಅವರು ರೈಲ್ವೆ ಸಚಿವರಾಗಿದ್ದರು. ಅಲ್ಲಿಂದ ತೆಗೆದು ಅವರನ್ನು ಕಾನೂನು ಇಲಾಖೆಗೆ ವರ್ಗಾಯಿಸಲಾಯಿತು. ಇದೀಗ ಅವರಿಗೆ ಮಹತ್ವವಲ್ಲದ ಸಾಂಖ್ಯಿಕ ಮತ್ತು ಯೋಜನೆ ಅನುಷ್ಠಾನ ನೀಡಲಾಗಿದೆ ಎಂದು ಪ್ರತಿಕ್ರಿಯಿಸಿದ್ದಾರೆ.
Comments are closed.