ಕರ್ನಾಟಕ

‘ಪುಟ್ಟಗೌರಿ’ ಧಾರಾವಾಹಿ ಪಾತ್ರಧಾರಿ ಸಾವು ಸಹಿಸಲಾಗದೆ ವೃದ್ಧರೊಬ್ಬರಿಗೆ ಹೃದಯಾಘಾತ !

Pinterest LinkedIn Tumblr

mandya

ಮಂಡ್ಯ: ತಮ್ಮ ನೆಚ್ಚಿನ ಧಾರಾವಾಹಿ ವೀಕ್ಷಿಸುವಾಗ ಅದರಲ್ಲಿನ ಪಾತ್ರಧಾರಿ ಸಾವನ್ನಪಿದ್ದನ್ನು ನೋಡಿ ವೃದ್ಧರೊಬ್ಬರು ಹೃದಯಾಘಾತದಿಂದ ಸಾವನ್ನಪ್ಪಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ.

ಮಂಡ್ಯದ ಕೆಆರ್‍ಪೇಟೆ ತಾಲೂಕಿನ, ಮಾಕವಳ್ಳಿ ಗ್ರಾಮದ ರಾಮೇಗೌಡ ಎಂಬುವವರು ಕಳೆದ ಮೂರು ದಿನಗಳ ಹಿಂದೆ ತಮ್ಮ ಮನೆಯಲ್ಲಿ ಸಂಜೆ ವೇಳೆ ಪುಟ್ಟಗೌರಿ ಮದುವೆ ಧಾರವಾಹಿ ವೀಕ್ಷಿಸುತ್ತಿದ್ದರು. ಈ ಸಂದರ್ಭದಲ್ಲಿ ಧಾರವಾಹಿ ನಾಯಕಿ ಪುಟ್ಟಗೌರಿ ಅವರ ತಾಯಿ ಭಾಗ್ಯ ಧಾರವಾಹಿಯಲ್ಲಿ ಸಾವನ್ನಪ್ಪುವ ದೃಶ್ಯ ಪ್ರಸಾರವಾಗಿತ್ತು.

ಇದನ್ನ ನೋಡಿ ದುಃಖದಿಂದ ಎಪ್ಪತ್ತು ವರ್ಷದ ರಾಮೇಗೌಡ ಕೂಡ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ. ಮನೆಯವರು ರಾಮೇಗೌಡರಿಗೆ ಊಟ ಕೊಡಲೆಂದು ಕರೆದಾಗ ಅವರು ಮೃತಪಟ್ಟಿರೋದು ಗೊತ್ತಾಗಿದೆ.

Comments are closed.