ಬೀಜಿಂಗ್ ಜು 05: ವಿಶ್ವದ ಅತ್ಯಂತ ಬೃಹತ್ ರೇಡಿಯೋ ಟೆಲಿಸ್ಕೋಪ್ ಅನ್ನು ನಿರ್ಮಾಣ ಮಾಡಿರುವ ಚೀನಾ ದೇಶ ತಂತ್ರಜ್ಞಾನ ಕ್ಷೇತ್ರದಲ್ಲಿ ಮತ್ತೊಂದು ಗರಿಯನ್ನು ಮುಡಿಗೇರಿಸಿಕೊಂಡಿದೆ. 4450 ಪ್ಯಾನೆಲ್ಗಳನ್ನು ಜೋಡಣೆ ಮಾಡಲಾಗಿರುವ ರೇಡಿಯೋ ಟೆಲಿಸ್ಕೋಪ್ ಜೋಡಣೆ ಕಾರ್ಯಗಳು ಭಾನುವಾರ ಮುಕ್ತಾಯಗೊಂಡಿದೆ.
ಚೀನಾದ ಗ್ವಿಂಝು ಪ್ರಾಂತ್ಯದ ಕಾರ್ಸ್ಟ್ ಪರ್ವತ ಶ್ರೇಣಿಯಲ್ಲಿರುವ ಬೃಹತ್ ರೇಡಿಯೋ ಟೆಲಿಸ್ಕೋಪ್ನ ನಿರ್ಮಾಣಕ್ಕಾಗಿ ವಾಸ್ತುಶಿಲ್ಪಿಗಳು, ತಜ್ಞರು, ವಿಜ್ಞಾನಿಗಳು, ವರದಿಗಾರರು ಸೇರಿದಂತೆ ಸುಮಾರು 300 ಮಂದಿ ಕಾರ್ಯ ನಿರ್ವಹಿಸಿದ್ದಾರೆ.
ಸೆಪ್ಟೆಂಬರ್ನಿಂದ ಅದು ಕಾರ್ಯ ನಿರ್ವಹಿಸಲಿದೆ ಎಂದು ಚೀನಾದ ‘ಕ್ಸಿನ್ವಾ ನ್ಯೂಸ್’ ಏಜೆನ್ಸಿ ವರದಿ ಮಾಡಿದೆ. ಭೂಮಿಯಾಚೆಗಿನ ಜೀವಿಗಳು ಮತ್ತು ಬ್ರಹ್ಮಾಂಡದ ಮೂಲವನ್ನು ತಿಳಿಯುವ ಅಧ್ಯಯನ ಮತ್ತು ಅನ್ಯ ಅಂಶಗಳ ಕುರಿತು ಅಧ್ಯಯನಕ್ಕೆ ಸಹಕಾರಿಯಾಗಲಿದ್ದು, ಮುಂದಿನ 10-20 ವರ್ಷಗಳಲ್ಲಿ ಜಾಗತಿಕ ನಾಯಕನಾಗುವ ಸಾಧ್ಯತೆಯಿದೆ ಎಂದು ಚೀನಾದ ರಾಷ್ಟ್ರೀಯ ಖಗೋಳ ವೀಕ್ಷಣಾ ಸಂಸ್ಥೆಯ ಉಪ ನಾಯಕ ಝೆಂಗ್ ಅಭಿಪ್ರಾಯಪಟ್ಟಿದ್ದಾರೆ.
ಇದು ಜರ್ಮನಿಯ 100 ಮೀಟರ್ ಟೆಲಿಸ್ಕೋಪ್ಗಿಂತ 10 ಪಟ್ಟು ಸೂಕ್ಷ್ಮಗ್ರಹಿಕೆ ಹೊಂದಿದೆ ಎಂದು ಅವರು ಹೇಳಿದ್ದಾರೆ.

Comments are closed.