
ಬೆಂಗಳೂರು: ಜನವರಿ 2014ರಲ್ಲಿ ಪ್ರಾಯೋಗಿಕವಾಗಿ ನೀಡಲಾಗಿದ್ದ ಉಚಿತ ಸಾರ್ವಜನಿಕ ವೈ-ಫೈ ಸೇವೆಯನ್ನು ನಗರ ಕಳೆದುಕೊಳ್ಳಲಿದೆ. ಈ ಯೋಜನೆ ಶುರುವಾಗಿ ಎರಡು ವರ್ಷಗಳೇ ಕಳೆದರೂ ಸರ್ಕಾರ ಈ ಬಗ್ಗೆ ಹೆಚ್ಚು ಆಸಕ್ತಿ ತೋರದೆ ಇರುವ ಕಾರಣ ಈ ಸೌಲಭ್ಯ ಹಿಂತೆಗೆದುಕೊಳ್ಳುವ ತೀರ್ಮಾನಕ್ಕೆ ಮಾಡಲಾಗಿದೆ. ಜುಲೈನಿಂದ ಡಿ-ವೋಯೋಸ್ ಕಮ್ಯುನಿಕೇಷನ್ಸ್ ಬ್ರಾಂಡ್ ಐಒಎನ್ ಬೆಂಗಳೂರಿನ ಕೆಲವು ಸ್ಥಳಗಳನ್ನು ಉಚಿತ ವೈ-ಫೈ ಸೇವೆಯನ್ನು ನೀಡುತ್ತಿತ್ತು. ಆದರೆ, ಈಗ ಆ ಕಂಪೆನಿ ನಿರ್ವಹಣೆ, ಅಳವಡಿಕೆಯ ವೆಚ್ಚ ಭರಿಸಲಾಗದೆ ಇದರಿಂದ ಹೊರಹೋಗಲು ನಿರ್ಧರಿಸಿದೆ.
ಈ ಯೋಜನೆಯು ಕರ್ನಾಟಕ ಮಾಹಿತಿ ಮತ್ತು ಸಂಪರ್ಕ ತಂತ್ರಜ್ಞಾನದ ಒಂದು ಕನಸಿನ ಕೂಸಾಗಿತ್ತು. ಈ ಯೋಜನೆ ಬಿಡುಗಡೆಯಾದಾಗ ನಮ್ಮ ಕಂಪೆನಿಗೆ ನಾಗರಿಕ ಸಂಸ್ಥೆಗಳಾದ ಮೆಟ್ರೋ ಮುನಿಸಿಪಾಲಿಟಿ ಮತ್ತು ಎಲೆಕ್ಟ್ರಿಸಿಟಿ ಇಲಾಖೆಗಳ ಬೆಂಬಲ ಸಿಕ್ಕ ಕಾರಣ ನಾವು ಯಶಸ್ವಿಯಾಗಿ ಈ ಯೋಜನೆಯನ್ನು ಜನರಿಗೆ ಮುಟ್ಟುವಂತೆ ಮಾಡಿದೆವು ಎನ್ನುತ್ತಾರೆ ಕಂಪನಿಯ ಮ್ಯಾನೇಜಿಂಗ್ ಡೈರೆಕ್ಟರ್ ರಮೇಶ್ ಸತ್ಯನಾರಾಯಣ.
ಈ ಯೋಜನೆಯನ್ನು ಬಿಡುಗಡೆ ಮಾಡುತ್ತಿದ್ದಂತೆ ಐಟಿ-ಬಿಟಿ ಇಲಾಖೆ ತನ್ನ ಯಾವ ಸಹಾಯವನ್ನು ಇದಕ್ಕೆ ನೀಡದೆ ಸುಮ್ಮನಾಯಿತು. ಇದರ ಪರಿಣಾಮ ಯೋಜನೆ ಶುರುವಾಗಿ ಎರಡು ವರ್ಷಗಳು ಕಳೆದರೂ ಯಾವ ಮುಂದುವರಿಕೆಯು ಕಾಣದೆ ಹೋಯಿತು.
ಸರ್ಕಾರಕ್ಕೆ ಈ ಬಗ್ಗೆ ಗಮನ ಹರಿಸಲು ಹಲವು ಬಾರಿ ಪತ್ರ ಬರೆದರೂ ಯಾವ ಪ್ರಯೋಜನವೂ ಆಗಲಿಲ್ಲ.ಈಗ ಮೂರು ವರ್ಷಗಳು ಕಳೆಯುತ್ತ ಬಂದಿದೆ. ನಮಗೆ ಯಾವ ಆದಾಯವು ಬರದ ಕಾರಣ ಸೇವೆಯನ್ನು ನೀಡಲಾಗುತ್ತಿಲ್ಲ. ಆದ್ದರಿಂದ ಈ ಯೋಜನೆಯಿಂದ ಹಿಂದೆ ಸರಿಯಲು ನಿರ್ಧರಿಸಿದ್ದೇವೆ ಎಂದು ಸತ್ಯನಾರಾಯಣ್ ತಿಳಿಸಿದ್ದಾರೆ.
Comments are closed.