ಹಾಸನ : ತನ್ನ ಪತಿ, ಅತ್ತೆ ಹಾಗೂ ಮಾವನಿಗೆ ಊಟದಲ್ಲಿ ನಿದ್ದೆ ಮಾತ್ರೆ ಬೆರೆಸಿದ ಮಹಿಳೆ ಬಳಿಕ ತನ್ನ ಪ್ರಿಯಕರನ ಜೊತೆ ಪರಾರಿಯಾದ ಘಟನೆ ತಾಲೂಕಿನ ಚಿನ್ನೇನಹಳ್ಳಿ ಎಂಬಲ್ಲಿ ನಡೆದಿದೆ.
ಮಹಿಳೆಯನ್ನು ಪುಷ್ಟಲತಾ ಎನ್ನಲಾಗಿದ್ದು, ಈಕೆಗೆ ಮೂರು ತಿಂಗಳ ಹಿಂದೆಯಷ್ಟೇ ವಿವಾಹವಾಗಿತ್ತು. ಆದರೆ ಈ ಮಧ್ಯೆ ಆಕೆಗೆ ಬೇರೊಬ್ಬನ ಜೊತೆ ಪ್ರೇಮಾಂಕುವಾಗಿತ್ತು. ಮದುವೆಯಾದರೂ ಪ್ರಿಯಕರನದ್ದೇ ಚಿಂತೆಯಾಗುತ್ತಿದ್ದುದರಿಂದ ಈಕೆ ಆತನ ಜೊತೆ ಪರಾರಿಯಾಗುವ ಸಲುವಾಗಿ ಊಟದ ಜೊತೆ ಮನೆ ಮಂದಿಗೆ ನಿದ್ದೆ ಮಾತ್ರೆ ಬೆರೆಸಿದ್ದಾಳೆ. ಅಂತೆಯೇ ಇವೆಲ್ಲಾ ನಿದ್ದೆ ಮಾಡಿದ ಬಳಿಕ ಪ್ರಿಯಕರನೊಂದಿಗೆ ಮನೆಯಲ್ಲಿದ್ದ ಚಿನ್ನಾಭರಣ ಮತ್ತು ಹಣದೊಂದಿಗೆ ಪರಾರಿಯಾಗಿದ್ದಾಳೆ.
ನಿದ್ದೆ ಮಾತ್ರೆ ಸೇವಿಸಿದ ಪರಿಣಾಮ ಇದೀಗ ಮೂವರು ತೀವ್ರವಾಗಿ ಅಸ್ವಸ್ಥಗೊಂಡಿದ್ದು ಅವರನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ.
ಈ ಸಂಬಂಧ ಹಾಸನ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Comments are closed.