ರಾಷ್ಟ್ರೀಯ

ಸಚಿವರ ಕಾರ್ಯಕ್ಷಮತೆ ಸಭೆಯಲ್ಲಿ ಮೊಬೈಲ್ ಬ್ಯಾನ್

Pinterest LinkedIn Tumblr

Modi-e1456394991327

ದೆಹಲಿ: ಸಚಿವರ ಕಾರ್ಯಕ್ಷಮತೆ ಪರಿಶೀಲನಾ ಸಭೆಯಲ್ಲಿ ಮೊಬೈಲ್ ಬಳಸುತ್ತಿದ್ದ ಸಚಿವರಿಗೆ ಪ್ರಧಾನಿ ನರೇಂದ್ರ ಮೋದಿ ಪರೋಕ್ಷವಾಗಿ ಚಾರ್ಜ್ ತೆಗೆದುಕೊಂಡಿದ್ದು ಮುಂದಿನ ದಿನಗಳಲ್ಲಿ ಸಭೆಯ ಸಂದರ್ಭದಲ್ಲಿ ಮೊಬೈಲ್ ಬಳಕೆ ನಿಷೇಧಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.

ಶನಿವಾರ ನಡೆದ ಸಚಿವರ ಕಾರ್ಯಕ್ಷಮತೆ ಪರಿಶೀಲನಾ ಸಭೆಯಲ್ಲಿ ಪವರ್ಪಾಯಿಂಟ್ ಪ್ರಸ್ತುತಿಗಳ ಪ್ರದರ್ಶನ ನಡೆಯುತ್ತಿತ್ತು. ಈ ವೇಳೆ ಕೆಲವು ಸಚಿವರುಗಳು ಮೊಬೈಲ್ ಫೋನ್ ಬಳಕೆ ಮಾಡುತ್ತಿರುವುದನ್ನು ಮೋದಿ ಗಮನಿಸಿದ್ದಾರೆ. ಸಭೆಯ ಅಂತಿಮ ಘಟ್ಟದಲ್ಲಿ ಕೆಲವು ಗಂಟೆಗಳು ಮೊಬೈಲ್ ಬಳಕೆ ಮಾಡದೇ ಇದ್ದರೂ ಜೀವನ ನಡೆಯಲಿದೆ ಎಂದು ಸಭೆಯಲ್ಲಿ ಮೊಬೈಲ್ ಬಳಕೆ ಮಾಡುತ್ತಿದ್ದ ಸಚಿವರನ್ನು ಪರೋಕ್ಷವಾಗಿ ತಾರಾಟೆಗೆ ತೆಗೆದುಕೊಂಡಿದ್ದಾರೆ.

ನಿಮಗ ಮೊಬೈಲ್ ಮುಖ್ಯವಾಗಿದ್ದರೆ ಮುಂದಿನ ದಿನಗಳಲ್ಲಿ ಇಂತಹ ಸಭೆಗಳಿಗೆ ಬರಬೇಡಿ, ನೀವು ಚುನಾವಣೆಗೂ ಮುನ್ನ ಜನರಿಗೆ ನೀಡಿದ್ದ ಭರವಸೆಗಳನ್ನು ಈಡೇರಿಸುವಲ್ಲಿ ಹೆಚ್ಚಿನ ಗಮನ ಕೊಡಿ. ಮೊಬಯಲ್ ಯಾವಾಗ ಬೇಕಾದರೂ ಬಳಸ ಬಹುದು ಎಂದು ಮೋದಿ ಮಂತ್ರಿಮಂಡಲದ ಸಭೆಯಲ್ಲಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಅಷ್ಟೇ ಅಲ್ಲದೆ ಮುಂದಿನ ಸಭೆಗಳಲ್ಲಿ ಈ ರೀತಿ ಮೊಬೈಲ್ ನ್ನು ಬಳಕೆ ಮಾಡಬಾರದು ಎಂದು ಮೋದಿ ಸಚಿವರುಗಳಿಗೆ ಸ್ಪಷ್ಟ ನಿರ್ದೇಶನ ನೀಡಿದ್ದಾರೆ.

Comments are closed.