ಅಂತರಾಷ್ಟ್ರೀಯ

ಅಧ್ಯಕ್ಷರ ಮಾತನ್ನು ಅರ್ಥೈಸದೇ ನಗ್ನವಾಗಿ ಕಾರ್ಯನಿರ್ವಹಿಸಿದ ಪೂರ್ವ ಯೂರೋಪ್ ವಾಸಿಗಳು.

Pinterest LinkedIn Tumblr

naked_workar_photo

ಬೆಲಾರಸ್ ಜುಲೈ.01: ದೇಶಾಧ್ಯಕ್ಷನ ಒಂದು ಮಾತು ಆ ದೇಶದ ಅದೆಷ್ಟೋ ಜನರನ್ನು ಬೆತ್ತಲಾಗಿಸಿದೆ. ಅಧ್ಯಕ್ಷನ ಮಾತನ್ನು ತಪ್ಪಾಗಿ ಅರ್ಥೈಸಿಕೊಂಡು ದೇಶದೆಲ್ಲೆಡೆ ಉದ್ಯೋಗಿಗಳು, ಕಲಾವಿದರು ಸಾವಿರಾರು ಜನ ತಮ್ಮ ಕಚೇರಿಗಳಲ್ಲಿ ಸ್ಟುಡಿಯೋಗಳಲ್ಲಿ ನಗ್ನರಾಗಿ ಕೆಲಸ ಮಾಡುತ್ತಿದ್ದಾರೆ. ಈ ಎಡವಟ್ಟು ನಡೆದಿದ್ದು ಯಾವ ದೇಶ ಗೊತ್ತಾ. ಪೂರ್ವ ಯೂರೋಪ್ನ ಬೆಲಾರಸ್ ದೇಶ.

ಈ ದೇಶದ ಅಧ್ಯಕ್ಷ ಅಲೆಗ್ಜಾಂಡರ್ ಲುಕಷೆಂಕೋ ಮಿನ್ಸ್ಕ್ನಲ್ಲಿ ನಡೆದ ಸಮ್ಮೇಳನವೊಂದರಲ್ಲಿ ದೇಶದ ಜನರನ್ನು ಉದ್ದೇಶಿಸಿ ಹೊಸ ತಂತ್ರಜ್ಞಾನದ ಬಗ್ಗೆ ಭಾಷಣ ಮಾಡಿದ್ದಾರೆ. ಅಧ್ಯಕ್ಷ ಅಲೆಗ್ಟಾಂಡರ್ ಭಾಷಣದಲ್ಲಿನ get undressed and work till you swet ಅನ್ನೋ ಒಂದು ವಾಕ್ಯವನ್ನು ಇಡೀ ದೇಶ ತಪ್ಪಾಗಿ ಅರ್ಥೈಸಿಕೊಂಡಿದೆ ಎನ್ನಲಾಗಿದೆ. ಅಂತೆಯೇ ದೇಶದ ಅಧ್ಯಕ್ಷರ ಕರೆಗೆ ಓಗೊಟ್ಟು ಕಚೇರಿಗಳಲ್ಲಿ ತಮ್ಮ ತಮ್ಮ ಕಾರ್ಯಸ್ಥಳಗಳಲ್ಲಿ ನಗ್ನರಾಗಿ ಕೆಲಸ ಮಾಡುತ್ತಿದ್ದಾರೆ. ನಗ್ನರಾಗಿ ಕೆಲಸ ಮಾಡಲು ಸಂಕೋಚವಾದವರೂ ದೇಹದ ಅಂಗಾಂಗಗಳಿಗೆ ಪೇಪರ್ ಇರಿಸಿಕೊಂಡು ಕೆಲಸ ಮಾಡಿದ್ದಾರೆ. ಪುರುಷರು, ಸ್ತ್ರೀಯರು ವಯೋಮಾನದ ತಾರತಮ್ಯವಿಲ್ಲದೇ ಎಲ್ಲರೂ ಹೀಗೆ ಬೆತ್ತಲೆಯಾಗಿದ್ದಾರೆ.

ಇಷ್ಟೇ ಅಲ್ಲದೆ ಈ ಫೋಟೋಗಳನ್ನು ಕಮೆಂಟ್ಗಳೊಂದಿಗೆ ಸಾಮಾಜಿಕ ಜಾಲತಾಣಗಳಲ್ಲಿ ಶೇರ್ ಮಾಡಿದ್ದಾರೆ. ನಮ್ಮ ದೇಶಾಧ್ಯಕ್ಷರೇ ಬೆತ್ತಲಾಗಿ ಕೆಲಸ ಮಾಡಿ ಎಂದಿದ್ದಾರೆ ಅದಕ್ಕೆ ಬೆತ್ತಲೆಯಾಗಿ ಕೆಲಸ ಮಾಡುತ್ತಿದ್ದೇವೆ” ಎಂಬರ್ಥದ ಕಮೆಂಟ್ಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ.

ದೇಶದ ಆರ್ಥಿಕ ಅಭಿವೃದ್ಧಿಗೆ ಬೆವರು ಇಳಿಯುವಷ್ಟು ಕಷ್ಟಪಟ್ಟು ಕೆಲಸ ಮಾಡಿ ಎಂಬ ದೇಶಾಧ್ಯಕ್ಷರ ಮಾತಿನ ಭಾವಾರ್ಥ ಅರ್ಥ ಮಾಡಿಕೊಳ್ಳದೇ ತಪ್ಪಾಗಿ ಅರ್ಥೈಸಿಕೊಂಡ ಜನ ಈ ಎಡವಟ್ಟು ಕೆಲಸ ಮಾಡಿದ್ದಾರೆ ಎನ್ನಲಾಗಿದೆ. ಬೆಲಾರಸ್ ಜನರ ಈ ವರ್ತನೆಗೆ ಇಡೀ ವಿಶ್ವವನ್ನು ನಿಬ್ಬೆರಗಾಗಿಸಿದೆ.

Comments are closed.