ಕರ್ನಾಟಕ

ಮೇಕಪ್,ಮೇಕಪ್ ಅಮೇಲೆ ಬ್ರೇಕಪ್

Pinterest LinkedIn Tumblr

mekeup_berekap_pic

ಎಲ್ಲರಿಗೂ ತಾವು ಚಂದ ಕಾಣಿಸಬೇಕು ಎನ್ನುವ ಆಸೆ ಇದ್ದೇ ಇರುತ್ತದೆ. ಹಾಗಾಗಿ ಆ ಕ್ರಿಮ್, ಈ ಕ್ರೀಮ್ ಅಂತ ಜಾಹಿರಾತಿನಲ್ಲಿ ಬರುವ ಕ್ರೀಮ್’ಗಳನ್ನು ಬಳಸುತ್ತೇವೆ. ಆ ಕ್ಷಣಕ್ಕೆ ಚಂದವಾಗಿ ಕಾಣಿಸುತ್ತದೆ. ಆದರೆ ಮೇಕಪ್ ಮಾಡುವಾಗ ನಾವು ಕೆಲವು ತಪ್ಪುಗಳನ್ನು ಮಾಡುತ್ತೇವೆ. ಅವ್ಯಾವುವು ಅಂತ ನೋಡೋಣ.
ಗಾಢವಾಗಿ ಫೌಂಡೇಶನ್ ಬಳಸುವುದು

ಕೆಲವರಿಗೆ ಗಾಢವಾಗಿ ಫೌಂಡೇಶನ್ ಬಳಸಿದರೆ ಸುಂದರವಾಗಿ ಕಾಣಿಸುತ್ತೇವೆ ಎನ್ನುವ ನಂಬಿಕೆಯಿದೆ. ಇದು ತಪ್ಪು. ಹೆಚ್ಚು ಹಚ್ಚುವುದರಿಂದ ಮುಖ ಅಸ್ಪಷ್ಟವಾಗಿ ವಿಚಿತ್ರವಾಗಿ ಕಾಣಿಸುತ್ತದೆ. ಹಾಗಾಗಿ ಸ್ವಲ್ಪ ಪ್ರಮಾಣದಲ್ಲಿ ತೆಗೆದುಕೊಂಡು ನಯವಾಗಿ ಹಚ್ಚುವುದರಿಂದ ಮುಖ ಸುಂದರವಾಗಿ ಮತ್ತು ಪರಿಪೂರ್ಣವಾಗಿ ಕಾಣುತ್ತದೆ. ನಂತರ ಸ್ಪಂಜನ್ನು ತೆಗೆದುಕೊಂಡು ಕೆಳಮುಖವಾಗಿ ನಿಧಾನವಾಗಿ ಒರೆಸಿಕೊಳ್ಳಿ.
ಜಾಸ್ತಿ ಬಣ್ಣ ಹಚ್ಚುವುದು

ಜಾಸ್ತಿ ಬಣ್ಣ ಹಚ್ಚುವುದರಿಂದ ಎದ್ದು ಕಾಣಿಸುತ್ತೇವೆ ಎಂಬ ಭ್ರಮೆಯಿದ್ದರೆ ಬಿಟ್ಟುಬಿಡಿ. ಚೆನ್ನಾಗಿ ಕಾಣಿಸುವ ಬದಲು ಮತ್ತಷ್ಟು ನಗೆಪಾಟಲಿಗೆ ಈಡಾಗುತ್ತೇವೆ. ಬಣ್ಣ ಹಚ್ಚುವಾಗ ಕಯ ಬೆರಳನ್ನು ಬಳಸಬಾರದು ಬದಲಾಗಿ ಬ್ರಷ್ ಬಳಸುವುದು ಉತ್ತಮ. ಬ್ರಷ್ ಬಳಸುವುದರಿಂದ ಮುಖಕ್ಕೆ ಪರಿಪೂರ್ಣವಾದ ಲುಕ್ ಬರುತ್ತದೆ. ಒಂದೇ ಜಾಗದಲ್ಲಿ ನಿಲ್ಲದಂತೆ ಎಲ್ಲಾ ಕಡೆ ಸಮವಾಗಿ ಹರಡುವಂತೆ ನೋಡಿಕೊಳ್ಳಬೇಕು.

ಅತಿಯಾದ ಲಿಪ್ ಸ್ಟಿಕ್ ಬಳಕೆ
ಲಿಪ್ ಸ್ಟಿಕ್ ಕಲರ್ ಆಯ್ಕೆ ತಪ್ಪಾಗಿದ್ದರೆ ಮೇಕಪ್ ಗಬ್ಬೆದ್ದು ಹೋಗುತ್ತದೆ. ಲಿಪ್ ಸ್ಟಿಕ್ ಬಣ್ಣ ತೊಡುವ ಬಟ್ಟೆಗೆ ಹೊಂದುವಂತಿರಬೇಕು. ಪಾರ್ಟಿಗಳನ್ನು ಹೊರತು ಪಡಿಸಿ ಆದಷ್ಟು ತೆಳುವರ್ಣದ ಬಳಸುವುದು ಒಳಿತು.

ಐ ಲೈನರ್ ಎಳೆಯುವಾಗ
ಕಣ್ಣಿಗೆ ಪರಿಪೂರ್ಣ ಲುಕ್ ಬರಲು ಐ ಲೈನರ್ ಬಳಸುವುದು ಸಾಮಾನ್ಯ. ಹೀಗೆ ಬಳಸುವಾಗ ಜಾಸ್ತಿ ಪ್ರಮಾಣದಲ್ಲಿ ಹಚ್ಚಿದಲ್ಲಿ ಮುಖ ವಿಕಾರವಾಗಿ ಕಾಣಿಸುತ್ತದೆ. ಮಾಡಿರುವ ಮೇಕಪ್ಪೆಲ್ಲಾ ವ್ಯರ್ಥವಾಗುತ್ತದೆ. ಹಾಗಾಗಿ ಕಣ್ಣುರೆಪ್ಪೆಗಳನ್ನು ಹೇಗಿದೆಯೋ ಹಾಗೆ ಬಿಡಿ.

Comments are closed.