ಕರ್ನಾಟಕ

ಮೈಸೂರು ಮೃಗಾಲಯದಲ್ಲಿ ಆನೆ, ಹುಲಿ ದತ್ತು ಪಡೆದ ದರ್ಶನ್

Pinterest LinkedIn Tumblr

Darshan-(96)

ಮೈಸೂರು: ಚ್ಯಾಲೆಂಜಿಂಗ್ ಸ್ಟಾರ್ ದರ್ಶನ್ ಹಸು, ಕುದುರೆ ಮತ್ತು ಇನ್ನಿತರೆ ಸಾಕುಪ್ರಾಣಿಗಳನ್ನ ಸಾಕ್ತಿರೋದು ಎಲ್ಲರಿಗೂ ಗೊತ್ತಿದೆ. ಇದೀಗ ದರ್ಶನ್ ಮೈಸೂರು ಮೃಗಾಲಯದಲ್ಲಿ ಆನೆ ಮತ್ತು ಹುಲಿಯೊಂದನ್ನು ದತ್ತು ಪಡೆದಿದ್ದಾರೆ.

ಹಲವು ವರ್ಷಗಳಿಂದ ಪ್ರಾಣಿಗಳನ್ನ ದತ್ತು ಪಡೆಯುತ್ತಿರೋ ದರ್ಶನ್ ಇದೀಗ ಒಂದು ವರ್ಷದ ಅವಧಿಗೆ ಆನೆ ಮತ್ತು ಹುಲಿಯನ್ನು ದತ್ತು ಪಡೆದಿದ್ದಾರೆ. ಎರಡು ದಿನಗಳ ಹಿಂದೆ ಮೈಸೂರಿಗೆ ಆಗಮಿಸಿ 2 ಲಕ್ಷದ 75 ಸಾವಿರ ರೂ. ಹಣ ನೀಡಿ ಈ 2 ಪ್ರಾಣಿಗಳನ್ನ ದತ್ತು ಸ್ವೀಕರಿಸಿದ್ದಾರೆ. ದರ್ಶನ್ ಅವರ ಪ್ರಾಣಿ ಪ್ರೀತಿಗೆ ಮೃಗಾಲಯದ ಅಧಿಕಾರಿಗಳು ಧನ್ಯವಾದ ತಿಳಿಸಿದ್ದಾರೆ.

Comments are closed.