ರಾಂಚಿ , ಜೂ.24 : ಮೊಬೈಲ್ ಕಸಿದುಕೊಂಡ ಪತಿಯ ಮರ್ಮಾಂಗವನ್ನೇ ಕತ್ತರಿಸಿರುವ ಭೀಕರ ಘಟನೆ ಜಾರ್ಖಂಡ್`ನಿಂದ ವರದಿಯಾಗಿದೆ. ರಾಜಧಾನಿ ರಾಂಚಿಯಿಂದ 95 ಕಿ.ಮೀ ದೂರದ ಹಜಾರಿಬಾದ್ ಪಟ್ಟಣದಲ್ಲಿ ಈ ಘಟನೆ ನಡೆದಿದೆ. ಸಂತ್ರಸ್ತ ಮೊಹಮ್ಮದ್ ಆಶಿಕ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಆಸ್ಪತ್ರೆಗೆ ಕರೆತಂದಾಗ ಮೊಹಮ್ಮದ್ ಸ್ಥಿತಿ ತೀರಾ ಭೀಕರವಾಗಿತ್ತು. ರಕ್ತದ ಮಡುವಿನಲ್ಲಿದ್ದ ಮೊಹಮ್ಮದ್, ತಾಳಲಾರದ ನೋವಿನಿಂದ ಒದ್ದಾಡುತ್ತಿದ್ದ. ಏನಾಗಿದೆ ಎಂದು ನೋಡಿದ ಆಸ್ಪತ್ರೆ ಸಿಬ್ಬಂದಿಗೆ ಶಾಕ್ ಆಗಿದೆ. ರೋಗಿಯ ಮರ್ಮಾಂಗವನ್ನೇ ಕತ್ತರಿಸಲಾಗಿತ್ತು.
ಏನಿದು ಪ್ರಕರಣ..?: 9 ವರ್ಷಗಳ ಹಿಂದೆ ಮೊಹಮ್ಮದ್ ಮತ್ತು ತರನ್ನುಮ್`ಗೆ ವಿವಾಹವಾಗಿತ್ತು. 3 ಮಕ್ಕಳೂ ಇದ್ದಾರೆ. ಈ ಮಧ್ಯೆ, ಪತಿ-ಪತ್ನಿ ನಡುವಿನ ಸಂಬಂಧ ಹದಗೆಟ್ಟಿತ್ತು.
ಸೋಮವಾರ ಪತ್ನಿ ತರನ್ನುಮ್ ಸ್ನೇಹಿತನ ಜೊತೆ ಮೊಬೈಲ್`ನಲ್ಲಿ ಚಾಟ್ ಮಾಡುತ್ತಿದ್ದಾಗ ಮಧ್ಯಪ್ರವೇಶಿಸಿದ ಪತಿ ಚಾಟಿಂಗ್ ನಿಲ್ಲಿಸುವಂತೆ ಹೇಳಿದ್ದಾನೆ. ತರನ್ನುಮ್ ನಿಲ್ಲಿಸದಿದ್ದಾಗ ಕೋಪಗೊಂಡ ಮೊಹಮ್ಮದ್ ಫೋನ್ ಕಸಿದುಕೊಂಡಿದ್ದಾನೆ. ಇದರಿಂದ ನೊಂದ ಪತ್ನಿ ಆತ್ಮಹತ್ಯೆ ಬೆದರಿಕೆ ಹಾಕಿದ್ದಾಳೆ. ಭಯಗೊಂಡ ಪತಿ ಪೊಲೀಸರಿಗೆ ದೂರು ನೀಡಿದ್ದ. ಪೊಲೀಸ್ ವಿಚಾರಣೆ ಬಳಿಕ ಇಬ್ಬರೂ ಮನೆಗೆ ಬಂದಿದ್ದಾರೆ. ರಾತ್ರಿ ಒಟ್ಟಿಗೆ ಮಲಗಿದ್ಧಾಗ ಸಮಯ ಸಾಧಿಸಿ ಪತ್ನಿ, ಚೂಪಾದ ಚಾಕುವಿನಿಂದ ಗಂಡನ ಮರ್ಮಾಂಗ ಕತ್ತರಿಸಿದ್ದಾಳೆ.
ಮದುವೆಯಾಗಿ 9 ವರ್ಷವಾಗಿದ್ದರೂ ಇಬ್ಬರ ನಡುವಿನ ಸಂಬಂಧ ಸುಧಾರಿಸಿರಲಿಲ್ಲ. ಸುಮಾರು 18 ಬಾರಿ ಪತ್ನಿ ಮನೆ ಬಿಟ್ಟು ತೆರಳಿದ್ದಳಂತೆ. ಹಲವು ಬಾರಿ ಪೊಲೀಸರು ಸಂಧಾನ ನಡೆಸಿದ್ದರೂ ಪ್ರಯೋಜನವಾಗಿರಲಿಲ್ಲ.

Comments are closed.