ಕರಾವಳಿ

ಬೈಂದೂರು: ಕೋಣದ ಕಾಲು ಕಟ್ಟಿ ಅಕ್ರಮವಾಗಿ ವಾಹನದಲ್ಲಿ ಸಾಗಿಸುತ್ತಿದ್ದ ನಾಲ್ವರ ಬಂಧನ

Pinterest LinkedIn Tumblr

ಕುಂದಾಪುರ: ಕೊಲ್ಲೂರು-ಬೈಂದೂರು ಹೆದ್ದಾರಿಯ ಎಲ್ಲೂರು ಎಂಬಲ್ಲಿ ಗುರುವಾರ ಸಂಜೆ ಇಕೋ ವಾಹನದಲ್ಲಿ ಆಕ್ರಮವಾಗಿ ಜಾನುವಾರನ್ನು ಸಾಗಾಟ ಮಾಡುತ್ತಿದ್ದ ತಂಡವನ್ನು ಅಡ್ಡಗಟ್ಟಿದ್ದ ಸ್ಥಳೀಯ ಯುವಕರು ಚಿಂತಾಜನಕ ಸ್ಥಿತಿಯಲ್ಲಿ ವಾಹನದಲ್ಲಿ ಬಂಧನದಲ್ಲಿ ಇದ್ದ ಜಾನುವಾರನ್ನು ಬಿಡುಗಡೆಗೊಳಿಸಿ, ಸಾಗಾಟ ಮಾಡುತ್ತಿದ್ದ ನಾಲ್ವರನ್ನು ಬೈಂದೂರು ಪೊಲೀಸರ ವಶಕ್ಕೆ ಒಪ್ಪಿಸಿದ್ದಾರೆ.

Kundapura_Byndoor_Illeagle Cow Transport (2) Kundapura_Byndoor_Illeagle Cow Transport (1) Kundapura_Byndoor_Illeagle Cow Transport (3) Kundapura_Byndoor_Illeagle Cow Transport (4)

ಕೊಲ್ಲೂರು ಸಮೀಪದ ಹಾಲ್‌ಕಲ್‌ನಿಂದ ಗೋಳಿಹೊಳೆಗೆ ಆಕ್ರಮ ಜಾನುವಾರು ಸಾಗಾಟ ನಡೆಯುತ್ತದೆ ಎನ್ನುವ ಖಚಿತ ಮಾಹಿತಿಯನ್ನು ಪಡೆದುಕೊಂಡ ಎಲ್ಲೂರು ಪರಿಸರದ ಯುವಕರು, ಸಂಜೆ ವಾಹನ ಬರುತ್ತಿರುವ ಖಚಿತ ಮಾಹಿತಿಯನ್ನು ಪಡೆದುಕೊಂಡು ವಾಹನವನ್ನು ತಡೆದು, ಅದರಲ್ಲಿ ಚಿಂತಾನಜನಕ ಸ್ಥಿತಿಯಲ್ಲಿ ಇದ್ದ ಜಾನುವಾರಿನ ಪ್ರಾಣವನ್ನು ಕಾಪಾಡಿದ್ದಾರೆ.

ಅಕ್ರಮ ಜಾನುವಾರ ಸಾಗಾಟ ಮಾಹಿತಿ ಪಡೆದು ಸ್ಥಳಕ್ಕೆ ಬಂದ ಬೈಂದೂರು ಪೊಲೀಸ್ ಠಾಣಾಧಿಕಾರಿ ಸಂತೋಷ್ ಕಾಯ್ಕಿಣಿ ಆರೋಪಿಗಳನ್ನು ವಶಕ್ಕೆ ಪಡೆದುಕೊಂಡು, ಪರಿಸ್ಥಿತಿಯನ್ನು ಶಾಂತಗೊಳಿಸಿದ್ದಾರೆ.

ಘಟನೆಯ ಕುರಿತಂತೆ ಮಾತನಾಡಿದ ಸ್ಥಳೀಯ ಯುವಕ ರಾಜೇಶ್ ಕಿಣಿ, ನಿರಂತರವಾಗಿ ಈ ಭಾಗದಲ್ಲಿ ಇದೆ ರೀತಿ ಆಕ್ರಮವಾಗಿ ಜಾನುವಾರ ಸಾಗಾಟ ನಡೆಸಲಾಗುತ್ತಿದೆ ಎನ್ನುವ ಸಾರ್ವಜನಿಕ ಮಾಹಿತಿಗಳಿವೆ. ಮುಗ್ದ ಜಾನುವಾರುಗಳನ್ನು ಅತ್ಯಂತ ಅಮಾನವೀಯವಾಗಿ ವಾಹನದಲ್ಲಿ ಕೈ ಕಾಲುಗಳನ್ನು ಕಟ್ಟಿ ಸಾಗಿಸಲಾಗುತ್ತಿದೆ. ಇಂದು ಆಕ್ರಮ ಸಾಗಾಟ ನಡೆಸಲು ಯತ್ನಿಸಿದವರನ್ನು ಪೊಲೀಸರ ವಶಕ್ಕೆ ನೀಡಿದ್ದೇವೆ, ಅವರ ವಿರುದ್ದ ಸೂಕ್ತ ಕಾನೂನು ಕ್ರಮ ಕೈಗೊಳ್ಳುವ ಮೂಲಕ ಮುಂದೆ ಈ ರೀತಿಯ ಘಟನೆಗಳು ನಡೆಯದಂತೆ ಪೊಲೀಸರು ಎಚ್ಚರಿಕೆ ವಹಿಸಬೇಕು ಎಂದು ಅವರು ಕೋರಿದ್ದಾರೆ.

Comments are closed.