ಕರ್ನಾಟಕ

ಮಾಚಿ ಸಚಿವ ಸೊರಕೆ ಕಾರಿಗೆ ಸ್ಕ್ವಾರ್ಪಿಯೋ ಢಿಕ್ಕಿ ;ಪಾರು

Pinterest LinkedIn Tumblr

Vinay-Kumar-Sorake-2ಉಡುಪಿ : ಇಲ್ಲಿನ ಅಂಬಲಪಾಡಿ ಬಳಿ ರಾಷ್ಟ್ರೀಯ ಹೆದ್ದಾರಿ 66ರಲ್ಲಿ  ಮಾಜಿ ಸಚಿವ,ಕಾಪು ಶಾಸಕ ವಿನಯ್‌ ಕುಮಾರ್‌ ಸೊರಕೆ ಅವರ ಕಾರಿಗೆ ಗುರುವಾರ ಬೆಳಗ್ಗೆ ಸ್ಕ್ವಾರ್ಪಿಯೋ ವಾಹನವೊಂದು ಢಿಕ್ಕಿಯಾಗಿದ್ದು,ಅದೃಷ್ಟವಷಾತ್‌ ಯಾವುದೇ ಪ್ರಾಣ ಹಾನಿ ಸಂಭವಿಸಿಲ್ಲ.

ಸೊರಕೆ ಅವರ ಕಾರಿಗೆ ಎಡಬದಿಯಿಂದ ಢಿಕ್ಕಿಯಾದ ಸ್ಕ್ವಾರ್ಪಿಯೋ ನಿಯಂತ್ರಣ ತಪ್ಪಿ ಉರುಳಿ ಬಿದ್ದು ಜಖಂಗೊಂಡಿದೆ.

ಸಚಿವರು ಹಾಗೂ ಕಾರಿನಲ್ಲಿದ್ದ ಚಾಲಕ ಸೇರಿದಂತೆ ಯಾರೋಬ್ಬರು ಗಾಯಗೊಂಡಿಲ್ಲ.  ಸ್ಕ್ವಾರ್ಪಿಯೋದಲ್ಲಿದ್ದವರು ಸಣ್ಣ ಪುಟ್ಟ ಗಾಯಗಳಿಗೊಳಗಾಗಿ ಪಾರಾಗಿದ್ದಾರೆ.

ಘಟನೆ ನಡೆದ ಬಳಿಕ ಕೆಲಹೊತ್ತು ಸಂಚಾರ ಅಸ್ತವ್ಯಸ್ತವಾಗಿತ್ತು.  ಉಡುಪಿ ಟ್ರಾಫಿಕ್‌ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
-ಉದಯವಾಣಿ

Comments are closed.