
ಬೆಂಗಳೂರು: ಸಚಿವ ಸಂಪುಟ ಪುನಾರಚನೆಯ ಪರಿಣಾಮವಾಗಿ ಕಾಂಗ್ರೆಸ್ ನಲ್ಲಿ ಭಿನ್ನಮತ ಉಂಟಾಗಿದ್ದು, ಸಚಿವ ಸ್ಥಾನ ಕಳೆದುಕೊಂಡ ನಾಯಕರು ಸಿದ್ದರಾಮಯ್ಯ ವಿರುದ್ಧ ಕಿಡಿ ಕಾರಿದ್ದರೆ, ಇತ್ತ ಸಿಎಂ ಸಿದ್ದರಾಮಯ್ಯ ನೂತನ ಸಚಿವರಿಗೆ ಖಾತೆಗಳನ್ನು ಹಂಚಿಕೆ ಮಾಡಿರುವ ಬಗ್ಗೆ ವರದಿ ಪ್ರಕಟವಾಗಿದೆ.
13 ನೂತನ ಶಾಸಕರಿಗೆ ಖಾತೆ ಹಂಚಿಕೆ ಮಾಡಿರುವ ಸಿಎಂ ಸಿದ್ದರಾಮಯ್ಯ ವಸತಿ, ವಾರ್ತಾ ಇಲಾಖೆ ಖಾತೆಯನ್ನು ತಮ್ಮ ಬಳಿಯೇ ಉಳಿಸಿಕೊಂಡಿದ್ದಾರೆ ಎಂದು ತಿಳಿದುಬಂದಿದೆ.
ಮಾಧ್ಯಮಗಳ ವರದಿ ಪ್ರಕಾರ ಸಚಿವರಿಗೆ ಹಂಚಿಕೆಯಾದ ಖಾತೆ ವಿವರಗಳು:
ರಮೇಶ್ ಕುಮಾರ್: ಆರೋಗ್ಯ ಖಾತೆ
ಕಾಗೋಡು ತಿಮ್ಮಪ್ಪ: ಕಂದಾಯ ಖಾತೆ
ಯುಟಿ ಖಾದರ್:ಆಹಾರ ಮತ್ತು ನಾಗರಿಕ ಸರಬರಾಜು
ರುದ್ರಪ್ಪ ಲಮಾಣಿ: ಮುಜರಾಯಿ, ಜವಳಿ
ಕಾನೂನು ಸಚಿವ ಟಿಬಿ ಜಯಚಂದ್ರ: ಸಣ್ಣ ನೀರಾವರಿ( ಹೆಚ್ಚುವರಿ ಜವಾಬ್ದಾರಿ)
ದೇಶಪಾಂಡೆ: ಕೈಗಾರಿಕೆ, ಮೂಲಸೌಕರ್ಯ ಖಾತೆ
ರೋಶನ್ ಬೇಗ್: ನಗರಾಭಿವೃದ್ಧಿ
ಪ್ರಿಯಾಂಕ್ ಖರ್ಗೆ: ಐಟಿ ಬಿಟಿ ಮತ್ತು ಪ್ರವಾಸೋದ್ಯಮ
ಬಸವರಾಜ ರಾಯರೆಡ್ಡಿ: ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ
ತನ್ವೀರ್ ಸೇಠ್: ಉನ್ನತ ಶಿಕ್ಷಣ, ವಕ್ಫ್
ಸಂತೋಷ್ ಲಾಡ್: ಕಾರ್ಮಿಕ
ರಮೇಶ್ ಜಾರಕಿಹೊಳಿ: ಸಣ್ಣ ಕೈಗಾರಿಕೆ
ಪ್ರಮೋದ್ ಮಧ್ವರಾಜ್: ಮೀನುಗಾರಿಕೆ, ಬಂದರು
ಎನ್.ಆರ್ ಸೀತಾರಾಂ: ಯುವಜನ ಖಾತೆ
Comments are closed.