ಕರಾವಳಿ

ಕುಂದಾಪುರ: ಖಾಸಗಿ ಬಸ್ಸು ಹಾಗೂ ಓಮ್ನಿ ಡಿಕ್ಕಿ: ಓಮ್ನಿಯಲ್ಲಿದ್ದ 8 ವಿದ್ಯಾರ್ಥಿಗಳು ದಾರುಣ ಸಾವು: ಹಲವರಿಗೆ ಗಾಯ(updated)

Pinterest LinkedIn Tumblr

ಕುಂದಾಪುರ : ಖಾಸಗಿ ಬಸ್ಸು ಮತ್ತು ಶಾಲಾ ಮಕ್ಕಳನ್ನು ಸಾಗಿಸುತ್ತಿದ್ದ ಓಮ್ನಿ ಕಾರು ಅಪಘಾತದಲ್ಲಿ ಓಮ್ನಿಯಲ್ಲಿದ್ದ 8 ಮಕ್ಕಳು ಸಾವನ್ನಪ್ಪಿ ಹಲವರು ಗಾಯಗೊಂಡ ದಾರುಣ ಘಟನೆ ಮಂಗಳವಾರ ತ್ರಾಸಿ ಮುಳ್ಳಿಕಟ್ಟೆ ಸಮೀಪದ ಮೋವಾಡಿ ಕ್ರಾಸ್ ಎಂಬಲ್ಲಿ ನಡೆದಿದೆ.

Kundapura TRasi_Accident Eight Childrens Death (22) Kundapura TRasi_Accident Eight Childrens Death (23) Kundapura TRasi_Accident Eight Childrens Death (1) Kundapura TRasi_Accident Eight Childrens Death (24) Kundapura TRasi_Accident Eight Childrens Death (17) Kundapura TRasi_Accident Eight Childrens Death (25) Kundapura TRasi_Accident Eight Childrens Death (20) Kundapura TRasi_Accident Eight Childrens Death (19) Kundapura TRasi_Accident Eight Childrens Death (21) Kundapura TRasi_Accident Eight Childrens Death (15) Kundapura TRasi_Accident Eight Childrens Death (12) Kundapura TRasi_Accident Eight Childrens Death (10) Kundapura TRasi_Accident Eight Childrens Death (8) Kundapura TRasi_Accident Eight Childrens Death (14) Kundapura TRasi_Accident Eight Childrens Death (9) Kundapura TRasi_Accident Eight Childrens Death (11) Kundapura TRasi_Accident Eight Childrens Death (16) Kundapura TRasi_Accident Eight Childrens Death (18) Kundapura TRasi_Accident Eight Childrens Death (6) Kundapura TRasi_Accident Eight Childrens Death (2) Kundapura TRasi_Accident Eight Childrens Death (4) Kundapura TRasi_Accident Eight Childrens Death (5) Kundapura TRasi_Accident Eight Childrens Death (7) Kundapura TRasi_Accident Eight Childrens Death (13) Kundapura TRasi_Accident Eight Childrens Death (3)

 Kunadapura_Trasi ACcident_ 8 Children Death (4) Kunadapura_Trasi ACcident_ 8 Children Death (2)

ತ್ರಾಸಿಯ ಡೊನ್ ಬೊಸ್ಕೋ ಶಾಲೆಯ ಸುಮಾರು 18 ಮಕ್ಕಳನ್ನು ಸಾಗಿಸುತ್ತಿದ್ದ ಓಮಿನಿ ಕಾರು ಇದಾಗಿದ್ದು ಓರ್ವ ಶಿಕ್ಷಕಿ ಹಾಗೂ ಚಾಲಕ ಸಹಿತ 20 ಜನರಿದ್ದರು. ಮಕ್ಕಳನ್ನು ಕುಳ್ಳೀರಿಸಿಕೊಂಡು ತ್ರಾಸಿಯ ಮುಳ್ಳಿಕಟ್ಟೆ ಸಮೀಪ ಆಗಮಿಸಿ ಶಾಲೆಗೆ ತೆರಳಲು ಬಲಕ್ಕೆ ತಿರುವು ತೆಗೆದುಕೊಳ್ಳೂವ ಸಂದರ್ಭ ಬೈಂದೂರಿನಿಂದ ಕುಂದಾಪುರಕ್ಕೆ ವೇಗವಾಗಿ ಸಾಗಿ ಬರುತ್ತಿದ್ದ ಖಾಸಗಿ ಬಸ್ಸು ಓಮಿನಿ ಕಾರಿಗೆ ಡಿಕ್ಕಿ ಹೊಡೆದಿದೆ. ಪರಿಣಾಮ ಓಮ್ನಿ ಕಾರಿನಲ್ಲಿದ್ದ 8 ಮಕ್ಕಳು ಸಾವನ್ನಪ್ಪಿದ್ದು, ಇದು ಮಕ್ಕಳು ತೀವ್ರವಾಗಿ ಗಾಯಗೊಂಡಿದ್ದಾರೆ. ಉಳೀದಂತೆ ಮಕ್ಕಳು ಸಣ್ಣಪುಟ್ಟ ಗಾಯಗಳಾಗಿದೆ. ಗಾಯಗೊಂಡ ಮಕ್ಕಳನ್ನು ಮಣಿಪಾಲ ಕೆ.ಎಂ.ಸಿ ಆಸ್ಪತ್ರೆ ಹಾಗೂ ಕುಂದಾಪುರ ಖಾಸಗಿ ಆಸ್ಪತ್ರೆಯಲ್ಲಿ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಡಿಕ್ಕಿಯ ರಭಸಕ್ಕೆ ಓಮಿನಿ ಕಾರಿನ ಪಾರ್ಶ್ವ ಭಾಗ ಸಂಪೂರ್ಣ ನಜ್ಜುಗುಜ್ಜಾಗಿದೆ.

ಸಾವನ್ನಪ್ಪಿದ ಮಕ್ಕಳೆಲ್ಲರೂ 6 ವರ್ಷದಿಂದ 15 ವರ್ಷ ಪ್ರಾಯದವರಾಗಿದ್ದಾರೆ.

ಈ ಬಗ್ಗೆ ಗಂಗೊಳ್ಳಿ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ. ಬಸ್ಸು ಚಾಲಕ ಮಂಜು ಹಾಗೂ ಬಸ್ಸಿನ ಮಾಲೀಕ ಮತ್ತು ನಿರ್ವಾಹಕ ಶಂಕರ ಶೆಟ್ಟಿಯನ್ನು ಪೊಲೀಸರು ಬಂದಿಸಿದ್ದಾರೆ.

ಹೆಚ್ಚಿನ ವಿವರಗಳು..

ಮೃತ ಮಕ್ಕಳ ವಿವರಗಳು:
ಒಟ್ಟು ಡಾನ್ ಬೋಸ್ಕೋ ಶಾಲೆಯ 18 ಶಾಲಾ ಮಕ್ಕಳು ಈ ಓಮ್ನಿ ಕಾರಿನಲ್ಲಿದ್ದರು. ಅವರ ಪೈಕಿ ನಿಖಿತಾ(13), ಕಾಲಿಸ್ಟಾ(13), ಡೆಲ್ವಿನ್(ಯುಕೆ.ಜಿ.) ಅನನ್ಯಾ(6), ಅಲ್ವಿತಾ(7) ಮ್ರತಪಟ್ಟ ಬಗ್ಗೆ ಪ್ರಾಥಮಿಕ ಮಾಹಿತಿಘಳು ಲಭಿಸಿದ್ದು ಇನ್ನೂ ಮೂವರ ಹೆಸರು ತಿಳಿದುಬಂದಿಲ್ಲ.

ಮಣಿಪಾಲ ಆಸ್ಪತ್ರೆಯಲಿರುವವರು…
ಮಣಿಪಾಲ ಕೆ.ಎಂ.ಸಿ. ಆಸ್ಪತ್ರೆಯ ಐಸಿಯು ವಿಭಾಗದಲ್ಲಿ ಐದು ಮಕ್ಕಳು ಚಿಕಿತ್ಸೆ ಪಡೆಯುತ್ತಿದ್ದಾರೆ. ಅವರೌಗಳ ವಿವರ ಇಂತಿದೆ. ಆರ್ಫಾ, ವಿನೋರಾ, ರೀಶಾ ಕ್ರಾಸ್ತಾ, ಮಾರಿಯೋ, ಪ್ರಿನ್ಸಿತಾ.

ಇನ್ನು ಓಮ್ನಿ ಚಾಲಕ ಮಾರ್ಟಿನ್ ಒಲಿವೇರಾ ಹಾಗೂ ಕಾರಿನಲ್ಲಿದ್ದ ಶಿಕ್ಷಕಿ ಫಿಲೋಮಿನಾ ಕುಂದಾಪುರ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಎಸ್ಪಿ, ಶಿಕ್ಷಣಾಧಿಕಾರಿಗಳು ಭೇಟಿ:
ಕುಂದಾಪುರ ಖಾಸಗಿ ಆಸ್ಪತ್ತ್ರೆಗೆ ಉಡುಪಿ ಎಸ್ಪಿ ಕೆ.ಅಣ್ಣಾಮಲೈ, ಎ.ಎಸ್.ಪಿ. ಸುಮನಾ, ಕುಂದಾಪುರ ಉಪವಿಭಾಗಾಧಿಕಾರಿ ಅಶ್ವಥಿ, ಉಡುಪಿ ಜಿಪಂ ಕಾರ್ಯನಿರ್ವಹಣಾಧಿಕಾರಿ ಪ್ರಿಯಾಂಕ ಮೇರಿ ಪ್ರಾನ್ಸಿಸ್, ಉಡುಪಿ ಜಿಲ್ಲಾಪಂಚಾಯತ್ ಅಧ್ಯ್ಕಕ್ಷ ದಿನಕರ್, ಉಡುಪಿ ಶಿಕ್ಷಣ ಇಲಾಖೆಯ ಡಿಡಿಪಿಐ ದಿವಾಕರ್ ಶೆಟ್ಟಿ, ಕುಂದಾಪುರ ಕ್ಷೇತ್ರ ಶಿಕ್ಷಣಾಧಿಕಾರಿ ಶೋಭಾ ಶೆಟ್ಟಿ, ಬೈಂದೂರು ಕ್ಷೇತ್ರ ಶಿಕ್ಷಣಾಧಿಕಾರಿ ನಾಗೇಶ್, ಅಕ್ಷರ ದಾಸೋಹದ ಅಧಿಕಾರಿ ಸೀತಾರಾಮ ಶೆಟ್ಟಿ ಶಳಕ್ಕೆ ಭೇಟಿನೀಡಿದ್ದರು.

ಕುಂದಾಪುರ ಡಿವೈಎಸ್ಪಿ ಮಂಜುನಾಥ ಶೆಟ್ಟಿ, ಕುಂದಾಪುರ ವ್ರತ್ತನಿರೀಕ್ಷಕ ದಿವಾಕರ ಪಿ.ಎಂ., ಬೈಂದೂರಿನ ಸುದರ್ಶನ್, ಗಂಗೊಳ್ಳಿ ಎಸ್.ಐ. ಸುಬ್ಬಣ್ಣ, ಕುಂದಾಪುರ ಎಸ್.ಐ. ನಾಸೀರ್ ಹಾಗೂ ಸಿಬ್ಬಂದಿಗಳು ಮೊಕ್ಕಾಂ ಹೂಡಿ ಮಕ್ಕಳನ್ನು ಚಿಕಿತ್ಸೆಗೆ ಸಾಗಿಸುವಲ್ಲಿ ಹರಸಾಹಸಪಟ್ಟರು.

Comments are closed.