ಬೆಂಗಳೂರು:ನನ್ನ ಕಾರಿನ ಮೇಲೆ ಕಾಗೆ ಕುಳಿತಿದ್ದಕ್ಕೆ ಕಾರು ಬದಲಾಯಿಸಿಲ್ಲ. ಆದರೆ ನನ್ನ ಕಾರ್ ಮೇಲೆ ಕಾಗೆ ಕುಳಿತಿದ್ದಕ್ಕೆ ಶನಿ ಕಾಟ ಎಂದು ಹೇಳಿ ದೊಡ್ಡ ಚರ್ಚೆಯನ್ನೇ ನಡೆಸಿದ್ದಾರೆ.ನನ್ನ ಆ ಕಾರಿಗೆ 3 ವರ್ಷವಾಗಿದ್ದರಿಂದ ಬದಲಾವಣೆ ಮಾಡಿದ್ದೇನೆ. ಹೊಸ ಕಾರನ್ನು 2 ತಿಂಗಳ ಹಿಂದೆಯೇ ಬುಕ್ ಮಾಡಲಾಗಿತ್ತು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.
ಸಿದ್ದರಾಮಯ್ಯಗೆ ಶನಿಕಾಟ ಶುರುವಾಗಿದೆ ಎಂದು ದೊಡ್ಡ ಗುಲ್ಲೆಬ್ಬಿಸಿದ್ದಾರೆ. ಕಾಗೆಗೆ ಎಡೆ ಇಟ್ಟು ಅದು ತಿಂದ ಬಳಿಕ ಊಟ ಮಾಡಿದ್ದಿದೆ. ಕಾಗೆಗೆ ಅಷ್ಟು ಬೆಲೆ ನೀಡುವವರು ತುಂಬಾ ಕೆಟ್ಟದಾಗಿ ಹೋಲಿಸಿದ್ದಾರೆ. ನನಗೆ ಅದರಲ್ಲೆಲ್ಲಾ ನಂಬಿಕೆ ಇಲ್ಲ. ಹಾಗಾಗಿ ನನ್ನ ಹೊಸ ಕಾರಿನ ಮೇಲೆ ಐದು ಕಾಗೆಯನ್ನು ಕೂರಿಸಲು ಸಿಬ್ಬಂದಿಗೆ ಹೇಳಿದ್ದೇನೆ ಎಂದು ಕಾಗೆ ಪ್ರಹಸನದ ಬಗ್ಗೆ ಸಿಎಂ ಹಾಸ್ಯ ಚಟಾಕಿ ಹಾರಿಸಿದ್ದಾರೆ.
=ಉದಯವಾಣಿ
Comments are closed.