ಕರ್ನಾಟಕ

ಮನೆಗೆಲಸದ ಮಹಿಳೆ ಮೇಲೆ ಅತ್ಯಾಚಾರ:ನೇಪಾಳಿ ಬಂಧನ

Pinterest LinkedIn Tumblr

17-BAN-3ಬೆಂಗಳೂರು: ಮನೆ ಕೆಲಸಕ್ಕಿದ್ದ ಜಾರ್ಖಂಡ್‌ ಮೂಲದ ಮಹಿಳೆ ಮೇಲೆ ಅದೇ ಮನೆಯಲ್ಲಿ ಕೆಲಸ ಮಾಡುತ್ತಿದ್ದ ನೇಪಾಳ ಮೂಲದ ಯುವಕನೊಬ್ಬ
ಅತ್ಯಾಚಾರವೆಸಗಿರುವ ಘಟನೆ ರಾಜರಾಜೇಶ್ವರಿನಗರ ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ರಾಮ್‌ ಸಿಂಗ್‌ ಬಹದ್ದೂರ್‌ (18) ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ. ಮಂಗಳವಾರ ಮಹಿಳೆ ಮೇಲೆ ಆರೋಪಿ ಅತ್ಯಾಚಾರ ಎಸಗಿ ಅದನ್ನು ಬಾಯಿಬಿಡದಂತೆ ಬೆದರಿಕೆ ಹಾಕಿದ್ದ ಎನ್ನಲಾಗಿದೆ. ಕೆಲ ವರ್ಷಗಳ ಹಿಂದೆ ನಗರಕ್ಕೆ ಬಂದಿದ್ದ ನೇಪಾಳ ಮೂಲದ ರಾಮ್‌ಸಿಂಗ್‌ ಬಹದ್ದೂರ್‌ ರಾಜರಾಜೇಶ್ವರಿನಗರದಲ್ಲಿರುವ ರಾಯ್ಕರ್‌ ಎಂಬುವರ ಮನೆಯಲ್ಲಿ ಕೆಸಲಕ್ಕೆ ಸೇರಿದ್ದ. ಅದೇ ಮನೆಯಲ್ಲಿ ಜಾರ್ಖಂಡ್‌ ಮೂಲದ 22 ವರ್ಷದ ಮಹಿಳೆ ಕೂಡ ಕೆಲಸ ಮಾಡುತ್ತಿದ್ದರು.

ಜೂನ್‌ 14ರಂದು ಮನೆ ಮಾಲೀಕರು ಹೊರಗೆ ಹೋಗಿದ್ದು, ಮನೆಯಲ್ಲಿ ಇಬ್ಬರು ಕೆಲಸದವರನ್ನು ಬಿಟ್ಟರೆ ಬೇರೆ ಯಾರೂ ಇರಲಿಲ್ಲ. ಈ ಅವಕಾಶವನ್ನು
ದುರುಪಯೋಗಪಡಿಸಿಕೊಂಡ ರಾಮ್‌ಸಿಂಗ್‌ ಬಹದ್ದೂರ್‌ ಮಹಿಳೆ ಮೇಲೆ ಅತ್ಯಾಚಾರ ಎಸಗಿದ್ದಾನೆ. ಬಳಿಕ ಈ ವಿಚಾರವನ್ನು ಯಾರಿಗೂ ಬಾಯಿಬಿಡಬಾರದು. ಒಂದು ವೇಳೆ ಬಹಿರಂಗಪಡಿಸಿದರೆ ಕೊಲೆ ಮಾಡುವುದಾಗಿ ಚಾಕು ತೋರಿಸಿ ಬೆದರಿಕೆ ಹಾಕಿದ್ದ ಎಂದು ಪೊಲೀಸರು ತಿಳಿಸಿದ್ದಾರೆ. ಹೀಗಾಗಿ ಮನೆ ಮಾಲೀಕರು ಬರುವವರೆಗೆ ಸುಮ್ಮನಿದ್ದ ಮಹಿಳೆ ಅವರು ಬರುತ್ತಿದಂತೆ ಘಟನೆ ಬಗ್ಗೆ ಮಾಹಿತಿ ನೀಡಿದ್ದಾರೆ.

ಅದರಂತೆ ಮಾಲೀಕ ರಾಯ್ಕರ್‌ ಅವರು ಸಂತ್ರಸ್ತ ಮಹಿಳೆ ಜತೆ ರಾಜರಾಜೇಶ್ವರಿನಗರ ಠಾಣೆಗೆ ತೆರಳಿ ರಾಮ್‌ಸಿಂಗ್‌ ಬಹದ್ದೂರ್‌ ವಿರುದ್ಧ ಅತ್ಯಾಚಾರ ದೂರು ದಾಖಲಿಸಿದ್ದಾರೆ. ತಕ್ಷಣ ಕಾರ್ಯಾಚರಣೆ ನಡೆಸಿದ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.
-ಉದಯವಾಣಿ

Comments are closed.