
ಬೆಂಗಳೂರು: ವಿಷ್ಣು ಸ್ಮಾರಕವನ್ನು ಬೆಂಗಳೂರಿನಿಂದ ಸ್ಥಳಾಂತರಿಸದಂತೆ ಡಾ. ವಿಷ್ಣು ಸೇವಾ ಸಮಿತಿ ನಡೆಸುತ್ತಿರುವ ಅನಿರ್ದಿಷ್ಟಾವಧಿ ಧರಣಿಗೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಬೆಂಬಲ ನೀಡಿದ್ದಾರೆ.

ತಮ್ಮ ಫೇಸ್‍ಬುಕ್ ಹಾಗೂ ಟ್ವಿಟರ್ ಅಕೌಂಟ್‍ನಲ್ಲಿ ಬೆಂಬಲ ಸೂಚಿಸಿರುವ ದರ್ಶನ್ ಒಳ್ಳೆಯ ವಿಷಯಕ್ಕಾಗಿ ಹೋರಾಡುತ್ತಿರುವ ವಿಷ್ಣು ದಾದಾ ಫ್ಯಾನ್ಸ್ ಜೊತೆ ನನ್ನ ಸಹಕಾರ ಸದಾ ಇರುತ್ತೆ. ಎಲ್ಲರೂ ಜೊತೆಯಾಗಿ ಸಾಗೋಣ. ನಾನು ಧರಣಿ ಸ್ಥಳಕ್ಕೆ ಬರಲಿಲ್ಲ ಎಂದು ಮಾತ್ರಕ್ಕೆ ಬೆಂಬಲ ಇಲ್ಲವೆಂದಲ್ಲ. ಎಲ್ಲಾ ಒಳ್ಳೆಯದಾಗಲಿ, ಸುಖಾಂತ್ಯ ಕಾಣಲಿ ಎಂದು ಹೇಳಿದ್ದಾರೆ.
Comments are closed.