ಮಾದಕ ನಟಿ ಸನ್ನಿ ಲಿಯೋನ್ ಇದೀಗ ಪತಿಯನ್ನೂ ಬಾಲಿವುಡ್ಗೆ ಪರಿಚಯಿಸುತ್ತಿದ್ದಾರೆ. ರಾಜೀವ್ ಚೌಧರಿ ನಿರ್ದೇಶನದ ಮುಂದಿನ ಚಿತ್ರ ‘ಬೀಮ್ಯಾನ್ ಲವ್’ನಲ್ಲಿ ಡೇನಿಯಲ್ ವೆಬರ್, ಸನ್ನಿಯೊಂದಿಗೆ ಇದೇ ಮೊದಲ ಬಾರಿಗೆ ಪರದೆ ಹಂಚಿಕೊಳ್ಳುತ್ತಿದ್ದಾರೆ.
ಪತ್ನಿ ನೀಲಿಚಿತ್ರಗಳಲ್ಲಿ ಸಕ್ರಿಯರಾಗಿದ್ದಾಗ ಯಾವ ತಕಾರರೂ ಎತ್ತದೆ ಬೆಂಬಲ ಸೂಚಿಸಿದ ವೆಬರ್ ಬಾಲಿವುಡ್ನಲ್ಲೂ ಸನ್ನಿಯ ಹಾಟ್ ಹಾಟ್ ಅವತಾರಕ್ಕೆ ಅಸ್ತು ಎಂದಿದ್ದರು. ಆದರೆ, ಇಲ್ಲಿ ಅವರು ತಮ್ಮ ಮೊದಲನೇ ಚಿತ್ರದಲ್ಲಿ ಪತ್ನಿಯೊಂದಿಗೆ ರೊಮ್ಯಾನ್ಸ್ ಮಾಡುತ್ತಿಲ್ಲ ಎನ್ನುವುದು ವಿಶೇಷ. ‘ಸನ್ನಿ ಮತ್ತು ನನ್ನೊಂದಿಗೆ ಚುಂಬನ ದೃಶ್ಯವನ್ನೂ ಇಡಬೇಡಿ, ಪ್ಲೀಸ್’ ಎಂದು ವೆಬರ್ ನಿರ್ದೇಶಕರಿಗೆ ಮನವಿ ಮಾಡಿದ್ದಾರೆ ಎನ್ನುವ ಸುದ್ದಿಯೂ ಹರಿದಾಡ್ತಿದೆ.
‘ಬೀಮ್ಯಾನ್ ಲವ್’ ತೆರೆಕಾಣುತ್ತಿರುವುದು ಆಗಸ್ಟ್ ತಿಂಗಳಲ್ಲಿ ಗಂಡ- ಹೆಂಡತಿ ಇಬ್ಬರೂ ಒಂದು ವಾರ ಕಾಲ ಇಟಲಿಯ ರೊಮ್ಯಾಂಟಿಕ್ ತಾಣಗಳಲ್ಲಿ ಪ್ರವಾಸ ಮುಗಿಸಿ ಬಂದಿದ್ದು, ಮತ್ತೆ ಚಿತ್ರೀಕರಣದಲ್ಲಿ ಪಾಲ್ಗೊಳ್ಳುತ್ತಿದ್ದಾರೆ. ಅದ್ಭುತ ಗಿಟಾರಿಸ್ಟ್ ಆಗಿರುವ ವೆಬರ್ ಈ ಚಿತ್ರದಲ್ಲೂ ಸಂಗೀತ ಪ್ರತಿಭೆ ತೋರಲಿದ್ದಾರಂತೆ.

Comments are closed.