
ಉಡುಪಿ: ಬೈಂದೂರಿನಲ್ಲಿ ರೈಲ್‌ರೋಕೋ ಮಾಡಿ ರೈಲನ್ನು ತಡೆಹಿಡಿದವರ ವಿರುದ್ಧ ದಾಖಲಾಗಿದ್ದ ಪ್ರಕರಣದ ವಿಚಾರಣೆ ಕುಂದಾಪುರ ಕೋರ್ಟ್‌ನಲ್ಲಿ ನಡೆದಿದ್ದು, ಆರೋಪಿಗಳಿಗೆ ದಂಡ ವಿಧಿಸಲಾಗಿದೆ. ಒಟ್ಟು 12 ಆರೋಪಿಗಳಿಗೆ 48,000ರೂ. ದಂಡ ವಿಧಿಸಿದ್ದು, ದಂಡ ಪಾವತಿಸದಿದ್ದಲ್ಲಿ 40 ದಿನಗಳ ಕಾಲ ಜೈಲು ಶಿಕ್ಷೆ ಅನುಭವಿಸಬೇಕು ಎಂದು ಕುಂದಾಪುರ ಮ್ಯಾಜಿಸ್ಟ್ರೇಟ್ ಕೋರ್ಟ್ ಆದೇಶಿಸಿದೆ.
ಮೇಲ್ಸೇತುವೆ ಹೋರಾಟ ಸಮಿತಿ ಅಧ್ಯಕ್ಷ ಡಾ| ಸುಬ್ರಹ್ಮಣ್ಯ ಭಟ್ ಹಾಗೂ ಶಂಕರ್ ದೇವಾಡಿಗ, ವಿಟ್ಠಲ್ ದೇವಾಡಿಗ, ಎಂ.ಪಿ. ಸಣ್ಣಯ್ಯ, ಸುರೇಂದರ್ ಶೇಟ್, ಭಾಸ್ಕರ್ ಶೆಟ್ಟಿ, ರವೀಂದ್ರ ಶೇಟ್, ಶಂಕರ್ ಮಂಜಪ್ಪ ದೇವಾಡಿಗ, ಸುಕುಮಾರ್ ಶೆಟ್ಟಿ, ಸುಭಾಶ್ಚಂದ್ರ ಶೇರುಗಾರ್, ನಾಗರಾಜ್ ಎಸ್. ಮತ್ತು ಅಬ್ದುಲ್ ಸಮದ್ ಆರೋಪಿಗಳಾಗಿದ್ದಾರೆ.
ಸಮಿತಿಯವರು ಕಳೆದ ಫೆ. 12 ರಂದು ಬೈಂದೂರು- ಗಂಗನಾಡು ಮಧ್ಯೆ ಮೇಲ್ಸೇತುವೆ ಬೇಕೆಂದು ಆಗ್ರಹಿಸಿ ಬೈಂದೂರು ರೈಲ್ವೇ ಲೆವೆಲ್ ಕ್ರಾಸಿಂಗ್ ಗೇಟ್ ಬಳಿ ರೈಲ್ವೇ ಹಳಿಗೆ ಬಂದು ರೈಲ್‌ರೋಕೋ ಮಾಡಿದ್ದರು.
(ಸಾಂದರ್ಭಿಕ ಚಿತ್ರ)
Comments are closed.