ಕರ್ನಾಟಕ

ಕಡಿಮೆ ವೆಚ್ಚದ ವಿಂಡ್ ಟರ್ಬೈನ್ :ಮನೆಗೆ ಬೇಕಾದಷ್ಟು ವಿದ್ಯುತ್ ಉತ್ಪಾದಿಸಿಸುವ ಹೊಸ ತಂತ್ರ

Pinterest LinkedIn Tumblr

eletrcity_bill_hike

ಒಂದು ಐಫೋನ್ ವೆಚ್ಚದಲ್ಲಿ ಇಡೀ ಜೀವಮಾನಕ್ಕೆ ಒಬ್ಬರ ಮನೆಗೆ ಬೇಕಾದಷ್ಟು ವಿದ್ಯುತ್ ಉತ್ಪಾದಿಸಬಹುದೆಂದರೆ ಆಶ್ಚರ್ಯವಾಗುವುದಲ್ಲವೇ ? ಆದರೆ ಇದು ಸಾಧ್ಯವೆಂದು ಹೇಳುತ್ತಾರೆ ಕೇರಳದ ಅರುಣ್ ಮತ್ತು ಅನೂಪ್ ಜಾರ್ಜ್ ಸಹೋದರರು.

ಅವಂತ್ ಗಾರ್ಡೆ ಇನ್ನೊವೇಶನ್ಸ್ ಎಂಬ ಸ್ಟಾರ್ಟ್ ಅಪ್ ಸಂಸ್ಥೆಯ ಸ್ಥಾಪಕರಾಗಿರುವ ಇವರು ಪರಿಸರಕ್ಕೆ ಹಾನಿಯಾಗದಂತೆ ವಿದ್ಯುತ್ ತಯಾರಿಸಲು ಒಂದು ಪರಿಹಾರ ಕಂಡುಕೊಂಡಿದ್ದಾರೆ. ಇವರು ಅಭಿವೃದ್ಧಿಪಡಿಸಿರುವ ಕಡಿಮೆ ವೆಚ್ಚದ ವಿಂಡ್ ಟರ್ಬೈನ್ ಒಂದು ಮನೆಗೆ ಜೀವಮಾನಪೂರ್ತಿ ವಿದ್ಯುತ್ ಸರಬರಾಜು ಮಾಡಬಹುದು. ಒಂದು ಸೀಲಿಂಗ್ ಫ್ಯಾನಿನ ಗಾತ್ರದ ಈ ಟರ್ಬೈನ್ ದಿನವೊಂದಕ್ಕೆ 5. ಕಿಲೋವಾಟ್ ವಿದ್ಯುತ್ ಉತ್ಪಾದಿಸುತ್ತದೆ ಹಾಗೂ ಅದರ ಒಟ್ಟು ವೆಚ್ಚ ಕೇವಲ 750 ಅಮೇರಿಕನ್ ಡಾಲರ್, ಅಂದರೆ ಅಂದಾಜು ರೂ 50,000 ಆಗಿದೆ. ಈ ವಿಂಡ್ ಟರ್ಬೈನ್ ಈ ವರ್ಷ ಬಿಡುಗಡೆಯಾಗಲಿದ್ದು ಮನೆಗಳಿಗೆ, ವಾಣಿಜ್ಯ ಮಳಿಗೆಗಳಿಗೆ ಹಾಗೂ ಹಳ್ಳಿಗಳಿಗೆ ಉಪಯುಕ್ತವಾಗಿದೆ.

ಸಾಧಾರಣವಾಗಿ ಒಂದು ಕಿಲೋವಾಟ್ ವಿದ್ಯುತ್ ಉತ್ಪಾದಿಸುವ ವಿಂಡ್ ಟರ್ಬೈನ್ ಬೆಲೆ ರೂ 3ರಿಂದ 7 ಲಕ್ಷದ ತನಕ ಇರುವಾಗ ಈ ಸಹೋದರರು ಕಳೆದ ವರ್ಷ ಆರಂಭಗೊಂಡ ಅವಂತ್ ಗಾರ್ಡ್ ಎಂಬ ತಮ್ಮ ಕಂಪೆನಿಯ ಮುಖಾಂತರ ಕೇವಲ ರೂ 50,000 ಅಥವಾ ಅದಕ್ಕಿಂತಲೂ ಕಡಿಮೆ ಬೆಲೆಗೆ ವಿಂಡ್ ಟರ್ಬೈನ್ ಒದಗಿಸಲಿದ್ದಾರೆ. ತನ್ನ ಪ್ರಥಮ ಸ್ಥಾವರವನ್ನು ಕಂಪೆನಿ ಈ ವರ್ಷದ ಜನವರಿಯಲ್ಲಿ ತಿರುವನಂತಪುರಂನಲ್ಲಿ ಆರಂಭಿಸಿತ್ತು. ಮೊದಲಾಗಿ ಸಣ್ಣ ವಿಂಡ್ ಟರ್ಬೈನ್ ಮಾದರಿಯನ್ನು ಅಭಿವೃದ್ಧಿ ಪಡಿಸಿದ ಸಂಸ್ಥೆ ಇದು 300 ಕಿಲೋವಾಟ್ ಹಾಗೂ ಅದಕ್ಕಿಂತ ಹೆಚ್ಚು ವಿದ್ಯುತ್ ಅಗತ್ಯವಿರುವವರಿಗೆ ಸಹಕಾರಿ ಎಂದು ಹೇಳಿತು. ಈ ಸಹೋದರರ ಕ್ರಾಂತಿಕಾರಿ ಸಾಧನ ಅವರಿಗೆ ಟಾಪ್ 20 ಕ್ಲೀನ್ಟೆಕ್ ಇನ್ನೊವೇಶನ್ಸ್ ಇನ್ ಇಂಡಿಯಾದಲ್ಲಿ ಸ್ಥಾನವೊಂದನ್ನು ನೀಡಿದೆ. “ಯುಎನ್ ಸಸ್ಟೇನೇಬಲ್ ಎನರ್ಜಿ ಫಾರ್ ಆಲ್’ ಕಾರ್ಯಕ್ರಮದಡಿಯಲ್ಲಿಯೂ ಪ್ರಥಮ 10 ಕ್ಲೀನ್ ಎನರ್ಜಿ ಕಂಪೆನಿಗಳಲ್ಲಿ ಅದು ಸ್ಥಾನ ಪಡೆದಿದೆ. ಗ್ಲೋಬಲ್ ವಿಂಡ್ ಎನರ್ಜಿ ಕೌನ್ಸಿಲ್ ಬಳಿಯಿರುವ ಅಂಕಿಸಂಖ್ಯೆಗಳ ಪ್ರಕಾರ ಪವನ ಯಂತ್ರ ವಿದ್ಯುತ್ ಉತ್ಪಾದನೆಯಲ್ಲಿ ಭಾರತವು ಚೀನಾ, ಅಮೇರಿಕಾ, ಜರ್ಮನಿ ನಂತರದ ನಾಲ್ಕನೇ ಸ್ಥಾನದಲ್ಲಿದೆ.

Comments are closed.