ಕರ್ನಾಟಕ

ವಿದ್ಯುತ್ ಸ್ಥಾವರದ ಭದ್ರತಾ ಸಿಬ್ಬಂದಿಯ ಅಮಾನವೀಯ ಕೃತ್ಯ : ನರಕಯಾತನೆ ಅನುಭವಿಸಿದ ಯುವಕ

Pinterest LinkedIn Tumblr

ವಿಜಯಪುರ, ಜೂ.11 : ವಿಜಯಪುರ ಜಿಲ್ಲೆ ಕೂಡಗಿ ಉಷ್ಣ ವಿದ್ಯುತ್ ಸ್ಥಾವರ, ರೈತರ ಮೇಲೆ ಗೋಲಿಬಾರ್ನಿಂದ ದೇಶಾದ್ಯಂತ ಸುದ್ದಿ ಮಾಡಿತ್ತು. ಇತ್ತೀಚೆಗೆ ಅಲ್ಲಿನ ಯುವಕರು ಸ್ಥಾವರದ ಹೊಂಡದಲ್ಲಿ ಈಜಿದ್ದಕ್ಕೆ ಅವರ ಮೇಲೆ ಬೂಟುಗಾಲಿಟ್ಟು ಭದ್ರತಾ ಸಿಬ್ಬಂದಿ ಮನಬಂದಂತೆ ಥಳಿಸಿದರು. ಸಿಬ್ಬಂದಿಯ ಥಳಿತಕ್ಕೊಳಗಾದ ಯುವಕರಲ್ಲಿ ಒಬ್ಬ ನಡೆಯಲೂ ಅಗದೇ ನರಕಯಾತನೆ ಅನುಭವಿಸುತ್ತಿದ್ದಾನೆ.

ಕೂಡಗಿ ಉಷ್ಣ ಸ್ಥಾವರದ ಬೃಹತ್ ಹೊಂಡದಲ್ಲಿ ಈಜಿದ್ದಕ್ಕೆ ಯುವಕರನ್ನ ಥಳಿಸಿ ರಾಷ್ಟ್ರೀಯ ಕೈಗಾರಿಕಾ ಸಿಬ್ಬಂದಿ ಅಮಾನವೀಯವಾಗಿ ನಡೆದುಕೊಂಡಿದ್ದರು. ಸಿಬ್ಬಂದಿಯಿಂದ ಥಳಿತ ಕ್ಕೊಳಗಾದ ಯುವಕರಲ್ಲಿ ಜಾವೆದ್ ಎಂಬಾತನ ಬೆನ್ನು ಹಾಗೂ ಸೊಂಟದ ಭಾಗದಲ್ಲಿ ಭಾರೀ ಪ್ರಮಾಣದಲ್ಲಿ ಗಂಟುಗಳಾಗಿ ತಿಂಗಳಿಂದ ನರಳಾಡುತ್ತಿದ್ದ. ವೇದನೆ ಹೆಚ್ಚಾದ ಹಿನ್ನೆಲೆ ನಗರದ ಖಾಸಗಿ ಆಸ್ಪತ್ರೆಯಲ್ಲಿ ವೈದ್ಯರು ಆತನಿಗೆ ಆಪರೇಷನ್ ಮಾಡಿದ್ದಾರೆ.

ಸಿಬ್ಬಂದಿ ಹೊಡೆತದಿಂದಲೇ ಈ ರೀತಿಯ ಗಂಟುಗಳಾಗಿದೆ ಅಂತ ಯುವಕ ಹಾಗೂ ಕುಟುಂಬಸ್ಥರು ಆರೋಪಿಸುತ್ತಿದ್ದಾರೆ. ಭದ್ರತಾ ಸಿಬ್ಬಂದಿಯ ದುರ್ನಡತೆ ಖಂಡಿಸಿ ಜಾವೇದ್ ಕುಟುಂಬದ ಸದಸ್ಯರು ದೂರು ನೀಡಿದರೂ ಪ್ರಯೋಜನವಾಗಿಲ್ಲ. ಕೂಲಿ ಮಾಡಿಕೊಂಡು ಜೀವನ ಸಾಗಿಸುವ ಜಾವೇದ್ ಕುಂಟುಂಬಕ್ಕೆ ಈ ಘಟನೆ ಬರ ಸಿಡಿಲು ಬಡಿದಂತಾಗಿದೆ. ನಮಗೆ ಸಹಾಯ ಮಾಡಿ ಎಂದು ಕಂಡ-ಕಂಡ ಜನಪ್ರತಿನಿಧಿಗಳಿಗೆ-ಅಧಿಕಾರಿಗಳಿಗೆ ದುಂಬಾಲು ಬಿದ್ರೂ ಯಾರೋಬ್ಬರೂ ಕ್ಯಾರೆ ಅಂದಿಲ್ಲ.

ಒಟ್ಟಾರೆ ಯುವಕರಿಗೆ ಮಾದರಿಯಾಗಬೇಕಿದ್ದ ಭದ್ರತಾ ಪಡೆಯೇ ಈ ರೀತಿ ಅಮಾನವೀಯವಾಗಿ ವರ್ತಿಸಿರುವುದು ನಿಜಕ್ಕೂ ದುರಂತ. ಥಳಿತ ಕ್ಕೊಳಗಾದ ಯುವಕನಿಗೆ ಪರಿಹಾರ ನೀಡಬೇಕು ದರ್ಪ ಮೆರೆದ ಸಿಬ್ಬಂದಿಯ ಮೇಲೆ ಕ್ರಮ ಕೈಗೊಳ್ಳಬೇಕು ಎನ್ನುವುದು ಸ್ಥಳೀಯರ ಆರೋಪ

Comments are closed.