ಕರ್ನಾಟಕ

ವಿಧಾನ ಪರಿಷತ್ ಚುನಾವಣೆಯಲ್ಲಿ ಜೆಡಿಎಸ್‍ಗೆ ಭಾರೀ ಮುಖಭಂಗ; ಕಾಂಗ್ರೆಸ್ 4, ಬಿಜೆಪಿ 2, ಜೆಡಿಎಸ್ ಗೆ 1 ಸ್ಥಾನ

Pinterest LinkedIn Tumblr

cong-bjp-jds

ಬೆಂಗಳೂರು:ವಿಧಾನ ಪರಿಷತ್ ಚುನಾವಣೆಯ ಫಲಿತಾಂಶ ಪ್ರಕಟಗೊಂಡಿದ್ದು ಜೆಡಿಎಸ್‍ಗೆ ತೀವ್ರ ಮುಖಭಂಗವಾಗಿದೆ. ಜೆಡಿಎಸ್‍ನ 5 ಮಂದಿ ಶಾಸಕರು ಅಡ್ಡ ಮತದಾನ ಮಾಡಿದ ಕಾರಣ ಎರಡನೇ ಅಭ್ಯರ್ಥಿ ಡಾ.ವೆಂಕಟಾಪತಿಗೆ ಸೋಲಾಗಿದೆ. 225 ಮತಗಳ ಪೈಕಿ 223 ಮತಗಳು ಸಿಂಧು ಆಗಿದ್ದರೆ, 2 ಮತಗಳು ಅಸಿಂಧು ಆಗಿವೆ.

ಫಲಿತಾಂಶದಲ್ಲಿ ಕಾಂಗ್ರೆಸ್‍ನ ನಾಲ್ವರು ಅಭ್ಯರ್ಥಿಗಳು, ಬಿಜೆಪಿಯ ಇಬ್ಬರು, ಜೆಡಿಎಸ್‍ನ ಒಬ್ಬರಿಗೆ ಗೆಲುವು ಸಿಕ್ಕಿದೆ. ಕಾಂಗ್ರೆಸ್‍ನ ಅಲ್ಲಂ ವೀರಭದ್ರಪ್ಪ, ಆರ್.ಬಿ.ತಿಮ್ಮಾಪುರ್, ವೀಣಾ ಅಚ್ಚಯ್ಯ, ರಿಜ್ವಾನ್ ಅರ್ಷದ್ ಆಯ್ಕೆ ಆಗಿದ್ದಾರೆ. ಬಿಜೆಪಿಯ ವಿ.ಸೋಮಣ್ಣ, ಎರಡನೆಯ ಅಭ್ಯರ್ಥಿ ಲೆಹರ್ ಸಿಂಗ್, ಜೆಡಿಎಸ್‍ನ ಕೆ.ವಿ ನಾರಾಯಣ ಸ್ವಾಮಿಗೆ ಗೆಲುವು ಸಿಕ್ಕಿದೆ.

ಯಾರಿಗೆ ಎಷ್ಟು ಮತ ಬಿದ್ದಿದೆ?
ಕಾಂಗ್ರೆಸ್‍ನ ಅಲ್ಲಂ ವೀರಭದ್ರಪ್ಪ-33, ಆರ್.ಬಿ.ತಿಮ್ಮಾಪುರ್-33, ವೀಣಾ ಅಚ್ಚಯ್ಯ-31, ರಿಜ್ವಾನ್ ಅರ್ಷದ್-34 ಬಿಜೆಪಿಯ ವಿ.ಸೋಮಣ್ಣ-31, ಲೆಹರ್ ಸಿಂಗ್‍ 27, ಜೆಡಿಎಸ್‍ನ ಕೆ.ವಿ.ನಾರಾಯಣಸ್ವಾಮಿ-30, ಡಾ.ವೆಂಕಟಾಪತಿಗೆ 5 ಮತಗಳು ಬಿದ್ದಿವೆ. ರಿಜ್ವಾನ್ ಅರ್ಷದ್, ಕೆ.ವಿ. ನಾರಾಯಣಸ್ವಾಮಿಗೆ ಹಾಕಿದ ಎರಡು ಮತಗಳು ಅಸಿಂಧು ಆಗಿವೆ.

Comments are closed.