ಕರ್ನಾಟಕ

ಕೂಡ್ಲಿಗಿಗೆ ಮರಳಿದ ಡಿಎವೈಎಸ್ಪಿ ಅನುಪಮಾ ಶೆಣೈ ಪ್ರತಿಕ್ರಿಯೆ ……

Pinterest LinkedIn Tumblr

anupama

ಬಳ್ಳಾರಿ : ಡಿವೈಎಸ್‌ಪಿ ಸ್ಥಾನಕ್ಕೆ ರಾಜೀನಾಮೆ ನೀಡಿರುವ ಅನುಪಮಾ ಶೆಣೈ ಪತ್ತೆಯಾಗಿದ್ದಾರೆ. ಗುರುವಾರ ಮುಂಜಾನೆ ಅವರು ಕೂಡ್ಲಿಗೆಗೆ ಆಗಮಿಸಿದ್ದಾರೆ. ಸದ್ಯ ಅನುಪಮಾ ಕೂಡ್ಲಿಗಿಯ ಪೊಲೀಸ್ ವಸತಿ ಗೃಹದಲ್ಲಿ ವಾಸ್ತವ್ಯ ಹೂಡಿದ್ದಾರೆ.

ತಮ್ಮ ಸಹೋದರ ಅಚ್ಯುತ್ ಜೊತೆ ಅನುಪಮಾ ಶೆಣೈ ಇಂದು ಬೆಳಗ್ಗೆ ಕೂಡ್ಲಿಗಿಗೆ ಆಗಮಿಸಿದ್ದಾರೆ.ಇಂದು ಸಂಜೆ ಅವರು ಬಳ್ಳಾರಿ ಎಸ್‌ಪಿ ಆರ್.ಚೇತನ್ ಅವರನ್ನು ಭೇಟಿ ಮಾಡುವ ಸಾಧ್ಯತೆ ಇದೆ. ಜೂನ್ 4ರ ಶನಿವಾರ ಅನುಪಮಾ ಶೆಣೈ ಅವರು ರಾಜೀನಾಮೆ ನೀಡಿದ್ದರು. ನಂತರ ಅವರು ಬಹಿರಂಗವಾಗಿ ಎಲ್ಲೂ ಕಾಣಿಸಿಕೊಂಡಿರಲಿಲ್ಲ.

ಫೇಸ್‌ಬುಕ್‌ನಲ್ಲಿ ಹಾಕಿರುವ ಸ್ಟೇಟ್‌ಸ್‌ ನಿಮ್ಮದೇನಾ ಮೇಡಮ್‌ ಅಂತಾ ಮಾಧ್ಯಮದವರು ಕೇಳಿದ ಪ್ರಶ್ನೆಗೆ ನಗುತ್ತಲೇ ಪ್ರತಿಕ್ರಿಯಿಸಿರುವ ಶೆಣೈ ಅವರು, ನನ್ನದು ಫೇಸ್‌ಬುಕ್‌ ಅಕೌಂಟ್‌ ಇಲ್ಲ. ಫೇಸ್‌ಬುಕ್‌ ಅಂದ್ರೇನೆ ಗೊತ್ತಿಲ್ಲ ಅಂದ್ರು. ಇನ್ನೂ ಮುಂದುವರಿದು ಹ್ಯಾಕ್‌ ಆಗಿರಬಹುದು ಅಂತಾ ಹೇಳಿದ್ರು. ಇನ್ನೂ ತಮ್ಮ ರಾಜೀನಾಮೆ ಸ್ವೀಕಾರ ಆಗಿಲ್ಲವಾದ್ದರಿಂದ ಹೆಚ್ಚಿನದನ್ನು ಮಾತನಾಡೊಲ್ಲ ಅಂತ ಹೇಳಿ ತಮ್ಮ ನಿವಾಸಕ್ಕೆ ತೆರಳಿದರು.

ಪೊಲೀಸ್ ಮಹಾನಿರ್ದೇಶಕರ ಸೂಚನೆಯಂತೆ ಅವರನ್ನು ಹುಡುಕಲು ಬುಧವಾರ ಪೊಲೀಸರ ತಂಡ ರಚನೆ ಮಾಡಲಾಗಿತ್ತು. ಬುಧವಾರ ರಾತ್ರಿ ಭಟ್ಕಳದಿಂದ ಹೊರಟ ಅನುಪಮಾ ಶೆಣೈ ಅವರು, ಹುಬ್ಬಳ್ಳಿ ಮೂಲಕ ಗುರುವಾರ ಮುಂಜಾನೆ 4.30ರ ಸುಮಾರಿಗೆ ಕೂಡ್ಲಿಗಿಯಲ್ಲಿರುವ ಪೊಲೀಸ್ ಕ್ವಾಟರ್ಸ್‌ಗೆ ಆಗಮಿಸಿದರು. ಸಂಜೆ ಅವರು ಬಳ್ಳಾರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳನ್ನು ಭೇಟಿ ಮಾಡಿ, ರಾಜೀನಾಮೆ ಪ್ರಕರಣದ ಬಗ್ಗೆ ವಿವರಣೆ ನೀಡುವ ಸಾಧ್ಯತೆ ಇದೆ.

ಇನ್ನೂ ಪಿ.ಟಿ ಪರಮೇಶ್ವರ್ ನಾಯಕ್ ಅವರ ಪ್ರಣಯ ಪ್ರಸಂಗದ ಸಿಡಿ ಮತ್ತು ಆಡಿಯೋ ಎರಡು ಇದೆ, ಸಂದರ್ಭ ಬಂದಾಗ ಬಿಡುಗಡೆ ಮಾಡುವುದಾಗಿ ಹೇಳಿದ್ದಾರೆ. ಚಿತ್ರದುರ್ಗದ ಹಾನಗಲ್ ಐಬಿಯಲ್ಲಿ ಮಹಿಳೆಯೋರ್ವಳ ಜೊತೆ ಪರಮೇಶ್ವರ ನಾಯಕ್ ಇದ್ದ ವಿಡಿಯೋ ನನ್ನ ಬಳಿ ಇದೆ ಎಂದು ಹೇಳಿದ್ದಾರೆ.

ಬಳ್ಳಾರಿಗೆ ಬಂದಿರುವ ಕುರಿತು ಅನುಪಮಾ ಫೇಸ್‌ಬುಕ್‌ ಸ್ಟೇಟಸ್ ‘ಮಾಧ್ಯಮ ಮಿತ್ರರೇ, ದಯವಿಟ್ಟು ಕ್ಷಮಿಸಿ. ತಡವಾಯಿತು ಕೂಡ್ಲಿಗಿಗೆ ಬರುವುದು. ಏನು ಮಾಡುವುದು ಹೇಳಿ, ಇಲಾಖೆಗೆ ಉತ್ತರಕುಮಾರರು ಬೇಕಂತೆ. ಭಟ್ಕಳದಿಂದ ಬಳ್ಳಾರಿಯ ವರೆಗೆ ಫುಲ್ Escort. ಆದ್ರೆ ಗಾಡಿ accelerator ಒತ್ತಿದ್ರೆ 60ಕ್ಕಿಂತ ವೇಗವಿಲ್ಲ. ಒಂದು ಗಾಡಿಯ ಆಕ್ಸೆಲ್ಲೂ ಕಟ್ಟಾಯಿತು ಎಂದು ಸ್ಟೇಟಸ್ ಹಾಕಿದ್ದಾರೆ.

Comments are closed.