ರಾಷ್ಟ್ರೀಯ

ಕೂದಲು ಕಸಿ ಮಾಡಲು ಹೋಗಿ ಜೀವ ಕಳೆದುಕೊಂಡ ವೈದ್ಯವಿದ್ಯಾರ್ಥಿ!

Pinterest LinkedIn Tumblr

hair

ಚೆನ್ನೈ: ಕೂದಲು ಕಸಿ ಮಾಡಿಸಿಕೊಂಡಿದ್ದ ವೈದ್ಯಕೀಯ ವಿದ್ಯಾರ್ಥಿಯೊಬ್ಬ ಕಸಿ ಮಾಡಿಸಿಕೊಂಡ ಮರುದಿನವೇ ಸಾವನ್ನಪ್ಪಿದ್ದಾನೆ. ಸಲೂನ್ ವಿರುದ್ಧ ವೈದ್ಯಕೀಯ ಆಯೋಗ ನೋಟಿಸ್‌ ಜಾರಿ ಮಾಡಿದೆ.

ವಿದ್ಯಾರ್ಥಿ ಸಂತೋಷ್ 15 ದಿನಗಳ ಹಿಂದೆ ಈ ಚಿಕಿತ್ಸೆಗೆ ಒಳಗಾಗಿದ್ದ. ಚಿಕಿತ್ಸೆ ನೀಡಿದ ಸ್ಥಳ ವೈದ್ಯಕೀಯ ಕೇಂದ್ರವೂ ಅಲ್ಲ. ಬದಲಾಗಿ ಅದೊಂದು ಸಲೂನ್‌.

ಕೂದಲು ಕಸಿ ಮಾಡುವಾಗ ಕೂದಲು ದಟ್ಟವಾಗಿರುವ ಜಾಗದಿಂದ ಚರ್ಮ ಸಮೇತ ಕೂದಲ ಬೇರನ್ನು ತೆಗೆದು ಕೂದಲಿಲ್ಲದ ಜಾಗದಲ್ಲಿ ಕಸಿ ಮಾಡುತ್ತಾರೆ. ಅದಕ್ಕಾಗಿ ಅರವಳಿಕೆ ಮದ್ದನ್ನು ಉಪಯೋಗಿಸುತ್ತಾರೆ. ಮೇ 17ರಂದು ವಿದ್ಯಾರ್ಥಿಗೆ ಕೂದಲು ಕಸಿ ಮಾಡಲು 10 ಗಂಟೆ ಸಮಯ ತೆಗೆದುಕೊಂಡಿದ್ದಾರೆ.

ಮರುದಿನ ರೋಗಿಯ ಆರೋಗ್ಯ ಸ್ಥಿತಿ ಗಂಭೀರವಾಗಿದೆ. ಕುಟುಂಬದವರು ಆತನನ್ನು ವೆಲ್ಲೂರಿನ ಕ್ರಿಸ್ಟಿಯನ್‌ ಮೆಡಿಕಲ್‌ ಕಾಲೇಜು ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಆತ ಆಸ್ಪತ್ರೆಗೆ ಬಂದ ಕೆಲ ಕ್ಷಣಗಳಲ್ಲೇ ಬಹು ಅಂಗಾಂಗ ವೈಫ‌ಲ್ಯಕ್ಕೊಗಾಗಿ ಮೃತನಾದ ಎಂದು ಆಸ್ಪತ್ರೆ ವರದಿ ನೀಡಿದೆ. ಅವರಿಗೆ ಆನಾಫ‌ಲ್ಯಾಕ್ಸಿಸ್‌ ಎಂಬ ಪ್ರಬಲ ಅಲರ್ಜಿ ಪ್ರಕ್ರಿಯೆಯಿಂದ ಅಂಗಾಗ ವೈಫ‌ಲ್ಯವಾಗಿದೆ. ಇದು ಅನಸ್ತೇಷಿಯಾದಿಂದ ಆಗಿರಬಹುದು ಎಂದು ಅಲ್ಲಿಯ ವೈದ್ಯರು ಹೇಳಿದ್ದಾರೆ.

ಕುಟುಂಬದವರು ಆತ ಅನಸ್ತೇಷಿಯ ಪಡೆಯಲು ಕಾರಣವೇನೆಂದು ಪತ್ತೆ ಮಾಡಿದಾಗ ಆತ ಕೂದಲ ಕಸಿ ಮಾಡಿಸಿಕೊಂಡಿದ್ದು ತಿಳಿದು ಬಂದಿದೆ. ಆದರೆ ಕುಟುಂಬದವರು ಪೊಲೀಸ್‌ ದೂರು ನೀಡಿಲ್ಲದ ಕಾರಣ ಮರಣೋತ್ತರ ಪರೀಕ್ಷೆಯೂ ನಡೆದಿಲ್ಲ.

ಈ ಕುರಿತು ಕ್ರಮ ಕೈಗೊಳ್ಳಲು ಮುಂದಾಗಿರುವ ರಾಜ್ಯ ವೈದ್ಯಕೀಯ ಮಂಡಳಿ ತಾನು ನೀಡಿರುವ ನೋಟಿಸ್‌ನಲ್ಲಿ ಶಸ್ತ್ರಚಿಕಿತ್ಸೆ ನಡೆಸುವ ಶೈಕ್ಷಣಿಕ ಅರ್ಹತೆ ಇಲ್ಲದಿದ್ದರೂ ಶಸ್ತ್ರಚಿಕಿತ್ಸೆ ನಡೆಸಿದ್ದು ಏಕೆ ಎಂದು ಕೇಳಿದೆ.

Comments are closed.