ಕರ್ನಾಟಕ

ಹೈಪ್ರೊಫೈಲ್ ವೇಶ್ಯಾವಾಟಿಕೆ ದಂಧೆ ಬಯಲು : ಖ್ಯಾತ ನಟಿ ಸೇರಿದಂತೆ ಇಬ್ಬರು ಮಾಡೆಲ್‌ಗಳ ಬಂಧನ

Pinterest LinkedIn Tumblr

prostitution

ಮುಂಬೈ ,ಜೂ.09 : ಮುಂಬೈ ಪೊಲೀಸರು ಹೈಪ್ರೊಫೈಲ್ ವೇಶ್ಯಾವಾಟಿಕೆ ದಂಧೆ ಬಯಲು ಮಾಡಿದ್ಧಾರೆ. ಧಾರಾವಾಹಿಯ ಖ್ಯಾತ ನಟಿ ಸೇರಿದಂತೆ ಇಬ್ಬರು ಮಾಡೆಲ್`ಗಳನ್ನ ಬಂಧಿಸಿದ್ಧಾರೆ. ಬಂಧನಕ್ಕೀಡಾಗಿರುವ ನಟಿ ಖಾಸಗಿ ಚಾನಲ್`ನ `ಸಾವಧಾನ್ ಇಂಡಿಯಾ’ ಕಾರ್ಯಕ್ರಮದಲ್ಲಿ ನಟಿಸುತ್ತಿದ್ದಳೆಂದು ತಿಳಿದುಬಂದಿದೆ.

ಗೊರೆಗಾಂವ್ ಪ್ರದೇಶದಲ್ಲಿ ಹೈಟೆಕ್ ವೇಶ್ಯಾವಾಟಿಕೆ ಬಗ್ಗೆ ಪೊಲಿಸರಿಗೆ ಈ ಮೊದಲೇ ಸುಳಿವು ಸಿಕ್ಕಿತ್ತು. ಹೀಗಾಗಿ, ಮಫ್ತಿಯಲ್ಲಿ ಹೊರಟ ಪೊಲೀಸ್ ಅಧಿಕಾರಿ ಪಿಂಪ್ ಎಂದು ಪರಿಚಯಿಸಿಕೊಂಡು ದಂಧೆಕೋರರ ಸಂಪರ್ಕ ಸಾಧಿಸಿದ್ದರು. ಬಳಿಕ ಸೆಕ್ಸ್ ದಂಧೆ ನಡೆಯುತ್ತಿದ್ದ ಕಟ್ಟಡದ ಮೇಲೆ ದಾಳಿ ನಡೆಸಿ ಮಾಡೆಲ್`ಗಳು ಮತ್ತು ಸೈರಾ, ಅಶ್ರಫ್ ಎಂಬ ಪಿಂಪ್`ಗಳನ್ನೂ ಬಂಧಿಸಲಾಗಿದೆ. ಕಿಂಗ್`ಪಿನ್`ಗಾಗಿ ಪೊಲೀಸರು ಬಲೆ ಬೀಸಿದ್ದಾರೆ.

ಸಾಮಾಜಿಕ ಜಾಲತಾಣದಲ್ಲಿ ಮಾಡೆಲ್`ಗಳ ಫೋಟೋಗಳನ್ನ ಡಿಸ್ಪ್ಲೇ ಮಾಡುತ್ತಿದ್ದ ದಂಧೆಕೋರರು ಬಳಿಕ ಗ್ರಾಹಕರನ್ನ ಆಹ್ವಾನಿಸುತ್ತಿದ್ದರು.ಗ್ರಾಹಕರಿಗೆ ಷ್ಟವಾದ ಬಳಿಕ ಗುಪ್ತ ಸ್ಥಳಕ್ಕೆ ಕರೆಸಿ ಮಾಡೆಲ್`ಗಳನ್ನ ಅವರ ಜೊತೆ ಹಾಸಿಗೆಗೆ ಕಳುಹಿಸುತ್ತಿದ್ದರು.

ಒಂದು ದಿನಕ್ಕೆ 50 ಸಾವಿರದಿಂದ 1 ಲಕ್ಷದವರೆಗೆ ಈ ಮಾಡೆಲ್`ಗಳು ಚಾರ್ಜ್ ಮಾಡುತ್ತಿದ್ದರು. ಕಾರ್ಪೊರೇಟ್ ಕುಳಗಳೇ ಇವರ ಟಾರ್ಗೆಟ್ ಎಂಬುದು ತನಿಖೆಯಲ್ಲಿ ತಿಳಿದುಬಂದಿದೆ.
ಟಿ.ವಿ ಇಂಡಸ್ಟ್ರೀಯ ಇನ್ನೂ ಹಲವು ನಟಿಯರು ದಂಧೆಯಲ್ಲಿ ತೊಡಗಿರುವ ಬಗ್ಗೆ ಮಾಹಿತಿ ಸಿಕ್ಕಿದ್ದು, ಮುಂಬೈ ಪೊಲೀಸರು ತನಿಖೆ ಮುಂದುವರೆಸಿದ್ದಾರೆ.

Comments are closed.