ಕರ್ನಾಟಕ

ರಾಮಚಂದ್ರಾಪುರ ಮಠದಲ್ಲಿ ಶ್ರೀಗಳ ಪರ-ವಿರೋಧ ಪ್ರತಿಭಟನೆ; ಪೊಲೀಸರ ನಿಯೋಜನೆ

Pinterest LinkedIn Tumblr

raghaweshwar-shreeಸಾಗರ(ಶಿವಮೊಗ್ಗ): ಶಿವಮೊಗ್ಗ ರಾಮಚಂದ್ರಾಪುರ ಮಠದ ರಾಘವೇಶ್ವರ ಭಾರತೀ ಸ್ವಾಮಿಗಳು ಅತ್ಯಾಚಾರ ಆರೋಪ ಎದುರಿಸುತ್ತಿರುವುದರಿಂದ ಶ್ರೀಗಳು ಪೀಠ ತ್ಯಾಗ ಮಾಡಬೇಕೆಂದು ಒತ್ತಾಯಿಸಿ ಸಮಾನ ಮನಸ್ಕರ ವೇದಿಕೆ ಕರೆದಿದ್ದ ಸಭೆಗೆ ಶ್ರೀಗಳ ಪರ ಭಕ್ತರು ವಿರೋಧ ವ್ಯಕ್ತಪಡಿಸಿದ್ದರಿಂದ ಮಾತಿನ ಚಕಮಕಿ, ಗುಂಪು ಗಲಭೆ ನಡೆದ ಘಟನೆ ನಡೆದಿದೆ.
ಶ್ರೀಗಳ ವಿರುದ್ಧ ಸಮಾನ ಮನಸ್ಕರ ವೇದಿಕೆ ಇಂದು ಸಾಗರದ ಬ್ರಾಹ್ಮಣ ಮಂಡಳಿಯಲ್ಲಿ ಸಭೆ ಕರೆದಿತ್ತು. ಆಗ ಹಲವರು ಸಭೆಗೆ ತೆರಳದಂತೆ ಶ್ರೀಗಳ ಪರ ಭಕ್ತರು, ಪೊರಕೆ, ಚಪ್ಪಲಿ ಹಿಡಿದು ದಾರಿಗೆ ಅಡ್ಡ ನಿಂತರು, ಈ ಸಂದರ್ಭದಲ್ಲಿ ಎರಡು ಗುಂಪುಗಳ ನಡುವೆ ಮಾತಿನ ಚಕಮಕಿ ಉಂಟಾಯಿತು.
ಪರಿಸ್ಥಿತಿಯನ್ನು ಸಹಜ ಸ್ಥಿತಿಗೆ ತರಲು 50ಕ್ಕೂ ಹೆಚ್ಚು ಪೊಲೀಸರನ್ನು ನಿಯೋಜಿಸಲಾಯಿತು.

Comments are closed.