ರಾಷ್ಟ್ರೀಯ

ರಾಹುಲ್ ಗಾಂಧಿ ವಸ್ತುಶಃ ಕಾಂಗ್ರೆಸ್ ಅಧ್ಯಕ್ಷ; ಕಾನೂನು ಪ್ರಕಾರ ಆಗಬೇಕಷ್ಟೆ: ಜೈರಾಮ್ ರಮೇಶ್

Pinterest LinkedIn Tumblr

jairam-rahulನವದೆಹಲಿ: ರಾಹುಲ್ ಗಾಂಧಿ ಕಾಂಗ್ರೆಸ್ ನ ನಿಜವಾದ ನಾಯಕ, ಆದರೆ ಕಾನೂನು ರೀತ್ಯಾ ಅವರು ಪಕ್ಷದ ನಾಯಕರಾಗಬೇಕಷ್ಟೆ. ತಡಮಾಡದೆ ಪಕ್ಷವನ್ನು ಸಜ್ಜುಗೊಳಿಸಿ ಪ್ರಧಾನಿ ನರೇಂದ್ರ ಮೋದಿಯವರ ವಿರುದ್ಧ ಹೋರಾಡಬೇಕಾಗಿದೆ ಎಂದು ಕಾಂಗ್ರೆಸ್ ಹಿರಿಯ ಮುಖಂಡ ಜೈರಾಮ್ ರಮೇಶ್ ಹೇಳಿದ್ದಾರೆ.
ಭಾರತ ಬದಲಾಗುತ್ತಿದ್ದಂತೆ ಕಾಂಗ್ರೆಸ್ ಕೂಡ ಪ್ರಸ್ತುತ ಬದಲಾಗುವ ಅಗತ್ಯವಿದೆ. ಅದಕ್ಕಿದು ಸೂಕ್ತ ಸಮಯ. ನಮ್ಮ ಸಂವಹನ ತಂತ್ರ ಪರಿಣಾ ಮಕಾರಿಯಾಗಿಲ್ಲ ಮತ್ತು ನಮಗೆ ಆಕ್ರಮಣಕಾರಿ ಪ್ರಭಾವದ ಅಗತ್ಯವಿದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.ಇತ್ತೀಚೆಗೆ ಹಲವು ರಾಜ್ಯಗಳಲ್ಲಿ ಕಾಂಗ್ರೆಸ್ ಸೋತಿರುವ ಕುರಿತು ಅವರು ಈ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ನಮಗೆ ಹಲವು ಸವಾಲುಗಳಿವೆ. ಹಾಗೆಂದು ಆಶಾವಾದ ಕಳೆದುಕೊಳ್ಳಬಾರದು. ಕಾಂಗ್ರೆಸ್ ಮುಕ್ತ ಎಂದು ಯಾರು ಬರೆಯುತ್ತಾರೆಯೋ ಅವರೇ ಅವರ ಅಕಾಲಿಕ ಸಂತಾಪವನ್ನು ಬರೆಯುತ್ತಿದ್ದಾರೆ ಎಂದು ಮಾಜಿ ಕೇಂದ್ರ ಸಚಿವ ಜೈರಾಮ್ ರಮೇಶ್ ಪಿಟಿಐಗೆ ನೀಡಿದ ಸಂದರ್ಶನದಲ್ಲಿ ಹೇಳಿದರು.
ರಾಹುಲ್ ಗಾಂಧಿಯವರ ನಾಯಕತ್ವವನ್ನು ಬಲವಾಗಿ ಸಮರ್ಥಿಸಿಕೊಂಡ ಅವರು, ಅನಿಶ್ಚಿತತೆ ಸಹಾಯ ಮಾಡುವುದಿಲ್ಲ. ರಾಹುಲ್ ಗಾಂಧಿಯವರಿಗೆ ಬಹಳ ಸಂಘಟಿತ ಪುನರ್ ಸಂಘಟನೆಯ ಆಲೋಚನೆಗಳಿವೆ. ಅವರು ಸದ್ಯದಲ್ಲೇ ತಮ್ಮ ಸ್ಥಾನಕ್ಕೆ ಮರಳುತ್ತಾರೆ. ಅವರು ವಸ್ತುಶಃ ನಾಯಕ. ಆದರೆ ಕಾನೂನು ರೀತ್ಯಾ ನಾಯಕರಾಗಿ ಘೋಷಣೆಯಾಗಬೇಕಷ್ಟೆ. ರಾಹುಲ್ ಗಾಂಧಿಯವರು ಆದಷ್ಟು ಬೇಗನೆ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಬೇಕು ಎಂದು ಹೇಳಿದರು.

Comments are closed.