ಕರ್ನಾಟಕ

ಪೆಟ್ರೋಲ್ ಬಂಕ್​​’ನ ಡಿಸೇಲ್’​ನಲ್ಲಿ ನೀರು : ಗ್ರಾಹಕರ ಕಾರ್‌‍ಎಂಜಿನ್ ಸೀಝ್

Pinterest LinkedIn Tumblr

petrol_rise

ಬೆಂಗಳೂರು ಜೂ.02: ಬೆಂಗಳೂರು ಕನಕಪುರ ಮಾರ್ಗ ಮಧ್ಯೆಯ ಶೆಲ್ ಪೆಟ್ರೋಲ್ ಬಂಕ್’ನ ಡಿಸೇಲ್’ನಲ್ಲಿ ನೀರು ಬೆರೆತ ಪರಿಣಾಮ ಕಾರಿನ ಮಾಲೀಕರು ಪರದಾಟ ಅನುಭವಿಸಿದರು.

ನಿನ್ನೆ ರಾತ್ರಿ ಈ ಪೆಟ್ರೋಲ್ ಬಂಕ್ ಗೆ ಬಂದ ಸುಮಾರು ಐವತ್ತಕ್ಕೂ ಹೆಚ್ಚು ಕಾರುಗಳು ಡಿಸೇಲ್ ಹಾಕಿಸಿಕೊಂಡಿದ್ದವು. ಡಿಸೇಲ್ ಹಾಕಿಸಿಕೊಂಡು ತುಸು ದೂರ ಹೋಗುತ್ತಿದ್ದಂತೆ ಕಾರುಗಳ ಎಂಜಿನ್ ಸೀಝ್ ಆಗಿದೆ. ಇದರಿಂದ ಗಾಬರಿಗೊಂಡ ಕಾರಿನ ಮಾಲಿಕರು ತಮ್ಮ ತಮ್ಮ ಕಾರುಗಳನ್ನು ಪೆಟ್ರೋಲ್ ಬಂಕ್’ಗೆ ತಂದು ಚೆಕ್ ಮಾಡಿಸಿದಾಗ ಡಿಸೇಲ್’ನಲ್ಲಿ ನೀರು ಬೆರೆತಿರುವುದು ಖಚಿತವಾಗಿದೆ.

ನಿನ್ನೆ ಮಳೆ ಬಂದು ಡಿಸೇಲ್ ಟ್ಯಾಂಕ್ ಒಳಗಡೆ ನೀರು ಬೆರೆತಿರುವ ಶಂಕೆ ವ್ಯಕ್ತವಾಗಿತ್ತು. ಆದರೆ ಅದು ಅಸಾಧ್ಯ ಎಂದು ಅರಿತ ಕಾರಿನ ಮಾಲಿಕರು, ಬಂಕ್ ಸಿಬ್ಬಂದಿ ವಿರುದ್ಧ ಗರಂ ಆಕ್ರೋಶ ಹೊರಹಾಕಿದ್ದರಲ್ಲದೆ, ಕಾರುಗಳಿಗೆ ಫಿಲ್ ಮಾಡಿಸಿದ್ದ ಡಿಸೇಲ್’ನ್ನು ಬಂಕ್’ನಲ್ಲಿಯೆ ಚೆಲ್ಲಿದರು.
ಘಟನೆ ಸಂಬಂಧ ತಲಘಟ್ಟಪುರ ಪೊಲೀಸ್ ಠಾಣೆಯಲ್ಲಿ ಕಾರಿನ ಮಾಲಿಕರು ದೂರು ದಾಖಲಿಸಿದ್ದಾರೆ.

Comments are closed.