ಕರ್ನಾಟಕ

ಹಿರಿಯ ಸಾಹಿತಿ ದೇ. ಜವರೇಗೌಡ ವಿಧಿವಶ

Pinterest LinkedIn Tumblr

DE

ಮೈಸೂರು: ಶತಾಯುಷಿ ಹಿರಿಯ ಸಾಹಿತಿ ದೇ.ಜವರೇಗೌಡ ಆವರು ಸೋಮವಾರ ಸಂಜೆ ಮೈಸೂರಿನ ಜಯದೇವ ಅಸ್ಪತ್ರೆಯಲ್ಲಿ ನಿಧನಹೊಂದಿದರು.

ದೇ.ಜವರೇಗೌಡ ಅವರು ದೀರ್ಘ‌ಕಾಲದ ಅನಾರೋಗ್ಯದಿಂದ ಬಳಲುತಿದ್ದು ಅವರನ್ನು ಚಿಕಿತ್ಸೆಗಾಗಿ ಮೈಸೂರಿನ ಜಯದೇವ ಆಸ್ಪತ್ರೆಗೆ ದಾಖಲಿಸಲಾಗಿತ್ತು ಸೋಮವಾರ ಚಿಕಿತ್ಸೆ ಫ‌ಲಕಾರಿಯಾಗಿದೆ ಕೊನೆಯುಸಿರುಳೆದರೆಂದು ಮೂಲಗಳಿಂದ ತಿಳಿದುಬಂದಿದೆ.

ದೇ.ಜವರೇಗೌಡರಿಗೆ 2001ರಲ್ಲಿ ಪದ್ಮಶ್ರೀ , 2008ರಲ್ಲಿ ಕರ್ನಾಟಕ ರತ್ನ ಪುರಸ್ಕಾರ ,1998ರಲ್ಲಿ ಪಂಪ ಪ್ರಶಸ್ತಿ , 2003ರಲ್ಲಿ ಗೊರೂರು ಪ್ರಶಸ್ತಿಗಳನ್ನು ತನ್ನ ಮಡಿಗೇರಿಸಿಕೊಂಡಿದ್ದರು. ಸಮಾರು 50ಕ್ಕೂ ಹೆಚ್ಚು ಕೃತಿಗಳನ್ನು ರಚಿಸಿದ್ದರು.

1969ರಿಂದ 1975ರವರೆಗೆ ಮೈಸೂರು ವಿಶ್ವವಿದ್ಯಾನಿಲಯದ ಕುಲಪತಿಯಾಗಿ ಸೇವೆ ಸಲ್ಲಿಸಿದ್ದರು.
ದೇಜಗೌ ಆವರ ನಿಧನದಿಂದ ಸಾಹಿತ್ಯಲೋಕಕ್ಕೆ ತುಂಬಲಾರದ ನಷ್ಟವುಂಟಾಗಿದೆ.
-ಉದಯವಾಣಿ

Comments are closed.