ರಾಷ್ಟ್ರೀಯ

ಕೈಕೊಟ್ಟ ವಿಮಾನ: ನಾಯ್ಡುಗೆ ಆರಂಭದಲ್ಲೆ ವಿಘ್ನ!

Pinterest LinkedIn Tumblr

varu47lmನವದೆಹಲಿ(ಪಿಟಿಐ): ಕೇಂದ್ರ ಸಚಿವ ಎಂ. ವೆಂಕಯ್ಯ ನಾಯ್ಡು ಮತ್ತು ರಾಜೀವ್‌ ಪ್ರತಾಪ್‌ ರೂಡಿ ಅವರು ದೆಹಲಿ ವಿಮಾನನಿಲ್ದಾಣದಿಂದ ಜೈಪುರಕ್ಕೆ ಪ್ರಯಾಣಿಸಬೇಕಿದ್ದ ವಿಮಾನದಲ್ಲಿ ತಾಂತ್ರಿಕ ದೋಷದಿಂದ ಪ್ರಯಾಣಿಸಬೇಕಾದ ಸಮಯದಲ್ಲಿ ವ್ಯತ್ಯಯ ಉಂಟಾಯಿತು.

ರಾಜಸ್ಥಾನದಿಂದ ರಾಜ್ಯಸಭೆಗೆ ಬಿಜೆಪಿ ಅರ್ಭಥಿಯಾಗಿ ನಾಮಪತ್ರ ಸಲ್ಲಿಸಲು ವೆಂಕಯ್ಯ ನಾಯ್ಡು ಸೋಮವಾರ ದೆಹಲಿಯಿಂದ ಜೈಪುರಕ್ಕೆ ತೆರಳಬೇಕಿತ್ತು. ಆದರೆ, ದೆಹಲಿ ವಿಮಾನ ನಿಲ್ದಾಣದಿಂದ ತೆರಳಬೇಕಿದ್ದ ಕೆಲವೇ ಕ್ಷಣಗಳಲ್ಲಿ ವಿಮಾನದಲ್ಲಿ ಇಂಧನ ಎಚ್ಚರಿಕೆ ಸಂಕೇತ ಬಂದ ಕಾರಣ ಪೈಲಟ್ ವಿಮಾನ ಸ್ಥಗಿತಗೊಳ್ಳಿಸಿದ್ದರು. ಇದು ನಾಯ್ಡು ಅವರಿಗೆ ಆರಂಭದಲ್ಲೇ ವಿಘ್ನ ಎನ್ನುವಂತಾಗಿದೆ.

ಘಟನೆ ಹಿನ್ನೆಲೆ ನಾಯ್ಡು ಮತ್ತು ರೂಡಿ ಅವರು ಖಾಸಗಿ ವಿಮಾನದಲ್ಲಿ ಜೈಪುರಕ್ಕೆ ತಲುಪಿದರು‌‌‌. ನಂತರ ವಿಮಾನನಿಲ್ದಾಣದಲ್ಲಿ ರಾಜಸ್ಥಾನ ಮುಖ್ಯಮಂತ್ರಿ ವಸುಂಧರಾ ರಾಜೆ ಅವರು ಬರಮಾಡಿಕೊಂಡು ನಾಮಪತ್ರ ಸಲ್ಲಿಸಲು ಹೊರಟರು.

ತಾಂತ್ರಿಕ ದೋಷದಿಂದ ಯಾವುದೇ ಅಹಿತಕಾರ ಘಟನೆ ಸಂಭವಿಸಿಲ್ಲ. ಹಾಗೂ ವೆಂಕಯ್ಯ ನಾಯ್ಡು ಮತ್ತು ರೂಡಿ ಇಬ್ಬರು ಸುರಕ್ಷಿತರಾಗಿದ್ದಾರೆ. ಜೈಪುರಕ್ಕೆ ತಲುಪಲು ವಿಮಾನ ಎರಡು ಗಂಟೆ ಕಾಲ ತಡವಾಯಿತ್ತು ಎಂದು ಬಿಜೆಪಿ ಮೂಲಗಳು ತಿಳಿಸಿವೆ.

ರಾಜ್ಯಸಭಾ ಚುನಾವಣೆಗೆ ನಾಮಪತ್ರ ಸಲ್ಲಿಸಲು ಮೇ 31 ಕೊನೆ ದಿನ. ಜೂನ್‌ 11ರಂದು ಚುನಾವಣೆ ನಡೆಯಲಿದೆ.

Comments are closed.