ಕರ್ನಾಟಕ

ನನ್ನ ಮಗ ರಾಜಕೀಯಕ್ಕೆ ಬರುವುದು ಬೇಡ: ಅಂಬರೀಶ್

Pinterest LinkedIn Tumblr

ambi

ಬೆಂಗಳೂರು: ವಸತಿ ಸಚಿವ ಹಾಗೂ ರೆಬೆಲ್‌ಸ್ಟಾರ್‌ಅಂಬರೀಶ್ ಅವರು ಭಾನುವಾರ ತಮ್ಮ 64ನೇ ಹುಟ್ಟು ಹಬ್ಬ ಆಚರಿಸಿಕೊಂಡರು. ಅಂಬರೀಶ್ ಅವರ ನೂರಾರು ಅಭಿಮಾನಿಗಳು ಜೆಪಿ ನಗರದ ಅವರ ಮನೆಗೆ ಆಗಮಿಸಿ ಶುಭಕೋರಿದರು. ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಅಂಬರೀಶ್, ನಾನು ಜನರ ಅಭಿಮಾನಕ್ಕೆ ಚಿರಋಣಿಯಾಗಿದ್ದೇನೆ ಎಂದರು.

ನನ್ನ ಮನೆಯಲ್ಲಿ ನಾನು ಬಿಟ್ಟು ಬೇರೆ ಯಾರೂ ರಾಜಕೀಯಕ್ಕೆ ಬರುವುದಿಲ್ಲ. ನನ್ನ ಮಗ ಅಭಿಷೇಕ್‌ಗೌಡ ಸಹ ರಾಜಕೀಯಕ್ಕೆ ಬರುವುದು ಬೇಡ. ಅವನ ದಾರಿ ಅವನು ನೋಡಿಕೊಳ್ಳುತ್ತಾನೆ ಎಂದರು.

ಇದೇ ವೇಳೆ ವಿಷ್ಣುವರ್ಧನ್‌ಅವರ ಸ್ಮಾರಕವನ್ನು ಬೆಂಗಳೂರಿನಲ್ಲೇ ನಿರ್ಮಾಣ ಮಾಡುವ ಗುರಿ ನಮ್ಮದು .ಈ ಕುರಿತಾಗಿ ಹಿರಿಯರು ಸೇರಿ ಚರ್ಚೆ ನಡೆಸಿದ್ದೇವೆ. ದಿವಂಗತ ಬಾಲಣ್ಣ ಅವರು ಚಿತ್ರರಂಗಕ್ಕೆ ಅಪಾರ ಕೊಡುಗೆ ನೀಡಿದ್ದಾರೆ ,ಅವರ ಕುಟುಂಬಕ್ಕೆ ತೊಂದರೆ ಕೊಡುವ ಇರಾದೆ ನಮಗಿಲ್ಲ.ಮುಂದೆ ಏನಾಗುತ್ತದೆ ಕಾದು ನೋಡುವ ಎಂದರು.

Comments are closed.