ಕರ್ನಾಟಕ

ಯುವಕನ ಕೊಲೆ ಉದ್ವಿಗ್ನಗೊಂಡ ಅರಸೀಕೆರೆ

Pinterest LinkedIn Tumblr

Hassan_webಅರಸೀಕೆರೆ: ನಗರದ ಹಾಸನ ವೃತ್ತದಲ್ಲಿ ಭಾನುವಾರ ಸಂಜೆ ಯುವಕನೊಬ್ಬನನ್ನು ದುಷ್ಕರ್ವಿುಗಳ ತಂಡ ಚಾಕುವಿನಿಂದ ಇರಿದು ಕೊಂದಿದ್ದು, ಘಟನೆ ನಂತರ ನಗರ ಉದ್ವಿಗ್ನಗೊಂಡಿದೆ.

ಅರುಣ ಎಂಬ ಯುವಕನನ್ನು ಅನ್ಯ ಕೋಮಿಗೆ ಸೇರಿದ ಐವರು ಯುವಕರು ನಡು ರಸ್ತೆಯಲ್ಲೇ ಹತ್ಯೆ ಮಾಡಿದ್ದಾರೆ. ಇದರಿಂದ ರೊಚ್ಚಿಗೆದ್ದ ಇನ್ನೊಂದು ಕೋಮಿನ ಯುವಕರು ರಸ್ತೆಯಲ್ಲಿ ಟೈರ್ಗಳಿಗೆ ಬೆಂಕಿಹಚ್ಚಿ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಕೆಲವು ರಸ್ತೆ ಬಳಿ ಪೆಟ್ಟಿಗೆ ಅಂಗಡಿಗಳಿಗೂ ಬೆಂಕಿ ಹಚ್ಚಲಾಗಿದೆ.

ಇದರಿಂದ ಭೀತಿಗೊಂಡ ವರ್ತಕರು ದಿಢೀರನೆ ಅಂಗಡಿಗಳನ್ನು ಮುಚ್ಚಿದ್ದಾರೆ. ಪೋಲೀಸರು ಗಸ್ತು ಆರಂಭಿಸಿದ್ದು, ಪರಿಸ್ಥಿತಿ ಕೈ ಮೀರದಂತೆ ಎಚ್ಚರ ವಹಿಸಿದ್ದಾರೆ.

Comments are closed.