ರಾಷ್ಟ್ರೀಯ

ಮಣಿ ದೇಹದಲ್ಲಿ ಮೆಥನಾಲ್ ಅಂಶ: ಪ್ರಯೋಗಾಲಯ ವರದಿ

Pinterest LinkedIn Tumblr

mani-webಕೊಚ್ಚಿ: ಮಲಯಾಳಂ ನಟ ಕಲಾಭವನ್ ಮಣಿ ಅವರು ಸಂಶಯಾಸ್ಪದವಾಗಿ ಸಾವನ್ನಪ್ಪಿದ ಮೂರು ತಿಂಗಳುಗಳ ನಂತರ ಮಣಿ ಅವರ ದೇಹದಲ್ಲಿ ಟಾಕ್ಸಿಕ್ ಮೆಥನಾಲ್ ಪ್ರಮಾಣವು ಹೆಚ್ಚಾಗಿತ್ತು ಎಂದು ಪ್ರಯೋಗಾಲಯದ ವರದಿ ಖಚಿತಪಡಿಸಿದೆ.

ಮಣಿ ಅವರ ರಕ್ತದ ಮಾದರಿಯಲ್ಲಿ ಕಳ್ಳಬಟ್ಟಿಯ ಅಂಶವೂ ಕಂಡುಬಂದಿತ್ತೆಂದು ಹೈದರಾಬಾದ್ ಪ್ರಯೋಗಾಲಯ ನೀಡಿದ ವರದಿತಿಳಿಸಿದೆ.

ಈ ಹಿಂದಿನ ಪ್ರಯೋಗಾಲಯದ ವರದಿಯಲ್ಲಿ ವಿಷಕಾರಿ ಕ್ಲೋರೊಫೈರಿಫೊಸ್ ಅಂಶವಿತ್ತೆಂದು ಹೇಳಲಾಗಿತ್ತು.

ತೀವ್ರ ಕರುಳು ಬೇನೆಯಿಂದ ಬಳಲಿದ್ದ 45ವರ್ಷದ ನಟ ಕಲಾಭವನ್ ಮಣಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಮಾರ್ಚ್ 6ರಂದು ಕೊನೆಯುಸಿರೆಳೆದಿದ್ದರು.

Comments are closed.