ರಾಷ್ಟ್ರೀಯ

ಫಿನ್​ ವೆುಕ್ಕಾನಿಕಾ ಜತೆ ಹೆಲಿಕಾಪ್ಟರ್ ಒಪ್ಪಂದ ರದ್ದುಗೊಳಿಸಿದ ಸರ್ಕಾರ

Pinterest LinkedIn Tumblr

heli_webನವದೆಹಲಿ: ರಕ್ಷಣಾ ಇಲಾಖೆಯ ಹೆಲಿಕಾಪ್ಟರ್ ಬಿಡಿಭಾಗಗಳ ಟೆಂಡರ್ ಪಡೆದಿದ್ದ ಇಟಲಿ ಮೂಲದ ಫಿನ್ವೆುಕ್ಕಾನಿಕಾ ಕಂಪನಿ ಜತೆಗಿನ ಒಪ್ಪಂದ ಅಗಸ್ತಾ ವೆಸ್ಟ್ಲ್ಯಾಂಡ್ ಹಗರಣದ ಹಿನ್ನೆಲೆಯಲ್ಲಿ ರದ್ದುಗೊಳಿಸಲು ಸರ್ಕಾರ ನಿರ್ಧರಿಸಿದೆ ಎಂದು ರಕ್ಷಣಾ ಸಚಿವ ಮನೋಹರ್ ಪರಿಕ್ಕರ್ ಹೇಳಿದ್ದಾರೆ.

ಅಗಸ್ತಾ ವೆಸ್ಟ್ಲ್ಯಾಂಡ್ ಹೆಲಿಕಾಪ್ಟರ್ ಖರೀದಿ ಹಗರಣದ ಪೂರ್ವಭಾವಿ ತನಿಖೆಯಲ್ಲಿ ಫಿನ್ವೆುಕ್ಕಾನಿಕಾ ಹೆಸರು ಥಳುಕು ಹಾಕಿಕೊಂಡ ಹಿನ್ನೆಲೆಯಲ್ಲಿ ಈ ನಿರ್ಧಾರಕ್ಕೆ ಬರಲಾಗಿದೆ, ಕಂಪೆನಿ ಮತ್ತು ಅದರ ಅಂಗ ಸಂಸ್ಥೆಗಳನ್ನು ಕಪ್ಪು ಪಟ್ಟಿಗೆ ಸೇರಿಸುವ ಪ್ರಕ್ರಿಯೆಗೆ ಕಾನೂನು ಸಚಿವಾಲಯ ಈಗಾಗಲೇ ಚಾಲನೆ ನೀಡಿದೆ ಎಂದು ಪರಿಕ್ಕರ್ ಹೇಳಿದ್ದಾರೆ.

ಫಿನ್ವೆುಕ್ಕಾನಿಕಾ ಮತ್ತು ಅದರ ಅಂಗ ಸಂಸ್ಥೆಗಳೊಡನೆ ಇರುವ ಎಲ್ಲಾ ವ್ಯವಹಾರಗಳನ್ನು ಕಡಿತಗೊಳಿಸಲಾಗುವುದು ಎಂದು ಅವರು ನುಡಿದರು. ರಕ್ಷಣಾ ಇಲಾಖೆಗೆ ಅಗತ್ಯವಿರುವ ಬಿಡಿಭಾಗಗಳ ವಾರ್ಷಿಕ ಆಮದಿಗೆ ಹೊಸ ಬಂಡವಾಳ ಸ್ವಾಧೀನ ಪ್ರಕ್ರಿಯೆ ನಡೆದಿದೆ. ಜಲಾಂತರ್ಗಾಮಿಗಳಲ್ಲಿ ಬಳಸುವ ಭಾರಿ ಸ್ಪೋಟಕಗಳ ಪೂರೈಕೆ ಮಾಡುತ್ತಿದ್ದ ಫಿನ್ವೆುಕ್ಕಾನಿಕಾ ಅಂಗಸಂಸ್ಥೆ ಡಬ್ಲೂಎಎಸ್ಎಸ್ ಜತೆ ಯುಪಿಎ ಸರ್ಕಾರ ಮಾಡಿಕೊಂಡಿದ್ದ ಒಪ್ಪಂದವನ್ನು ಹಿಂಪಡೆಯಲಾಗಿದೆ ಎಂದು ಪರಿಕ್ಕರ್ ಹೇಳಿದರು.

ವಾರ್ಷಿಕ ಆಮದು ಮತ್ತು ಒಪ್ಪಂದ ಈಗಾಗಲೇ ಅವಧಿ ಮೀರಿದ್ದು, ಸಂಬಂಧಪಟ್ಟ ಇಲಾಖೆಯಿಂದ ಅಧಿಕೃತ ದೃಢೀಕರಣ ಪಡೆಯುವವರೆಗೂ ಯಾವುದೇ ರಾಜಿ ಸಾಧ್ಯವಿಲ್ಲ, ಫಿನ್ವೆುಕ್ಕಾನಿಕಾ ಅಲ್ಲದಿದ್ದರೆ ಜಗತ್ತಿನ ಬೇರೆ ದಿಗ್ಗಜ ರಾಷ್ಟ್ರಗಳಾದ ಅಮೆರಿಕ ಅಥವಾ ರಷ್ಯಾದೊಂದಿಗೆ ಸ್ವಲ್ಪ ತುಟ್ಟಿಯಾದರೂ ಒಪ್ಪಂದ ಮಾಡಿಕೊಳ್ಳಲಾಗುವುದು ಎಂದು ಪರಿಕ್ಕರ್ ಖಂಡತುಂಡವಾಗಿ ಹೇಳಿದ್ದಾರೆ.

Comments are closed.